ಅಮಾನವೀಯ ಘಟನೆ: ಬಾಲಕಿಯನ್ನ3ನೇ ಮಹಡಿಯಿಂದ ತಳ್ಳಿ ಕೊಂದ ಮಲತಾಯಿ

ಬೀದರ್ ,ಸೆಪ್ಟಂಬರ್,16,2025 (www.justkannada.in): ಮಲತಾಯಿಯೇ 7 ವರ್ಷದ ಬಾಲಕಿಯನ್ನ 3ನೇ ಮಹಡಿಯಿಂದ  ತಳ್ಳಿ ಕೊಲೆ ಮಾಡಿರುವ ಅಮಾನವೀಯ ಘಟನೆ ಬೀದರ್ ನಲ್ಲಿ ನಡೆದಿದೆ.

ನಗರದ ಆದರ್ಶ ಕಾಲೋನಿಯಲ್ಲಿ ಈ ಘಟನೆ ನಡೆದಿ‍ದೆ. ಶಾನವಿ (7)  ಮೃತ ಬಾಲಕಿ. ರಾಧಾ  ಎಂಬಾಕೆಯೇ ಬಾಲಕಿ ಹತ್ಯೆ ಮಾಡಿದ ಮಲತಾಯಿ. ಆಗಸ್ಟ್ 27ರಂದು ಈ ಘಟನೆ ನಡೆದಿದ್ದು,  ಶಾನವಿ ಮೃತಪಟ್ಟಾಗ ಮಹಡಿಯಿಂದ ಆಯತಪ್ಪಿ ಬಿದ್ದು ಮಗಳು ಜೀವ ಬಿಟ್ಟಿದ್ದಾಳೆ ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ಆದರೆ ಪಕ್ಕದ ಮನೆಯವರು ಸಿಸಿಟಿವಿ ದೃಶ್ಯ ಕಳುಹಿಸಿದ ಬಳಿಕ ಮಲತಾಯಿ ಕೊಂದಿರುವ  ಕೃತ್ಯ ಬೆಳಕಿಗೆ ಬಂದಿದೆ.

ಮೇಲ್ಮಹಡಿಯಲ್ಲಿ ಖುರ್ಚಿ ಇಟ್ಟು ಅದರ ಮೇಲೆ ಬುಟ್ಟಿ ಉಲ್ಟಾ ಇಟ್ಟು ಶಾನವಿಯನ್ನ ಕೂರಿಸಿರೊದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಮೃತ ಬಾಲಕಿ ಅಜ್ಜಿ, ರಾಧಾ ವಿರುದ್ಧ ದೂರು ನೀಡಿದ್ದು, ಈ ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿದ್ದಾರೆ.

Key words: Stepmother, pushes, girl, death, 3rd floor