ಕೇಂದ್ರ ಸರ್ಕಾರಕ್ಕೆ ಹಿನ್ನೆಡೆ: ನೂತನ ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ತಡೆ ನೀಡಿ ತಜ್ಞರ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್…

ನವದೆಹಲಿ,ಜನವರಿ,12,2021(www.justkannada.in):  ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಸುಪ್ರೀಂಕೋರ್ಟ್  ಮೂರು ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿ ತಜ್ಞರ ಸಮಿತಿ ರಚಿಸಿ ಆದೇಶಿಸಿದೆ.jk-logo-justkannada-mysore

ವಿವಾದಿತ ಕೃಷಿ ಮಸೂದೆ ಕುರಿತು ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ಕುರಿತು ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯವು, ಕೃಷಿ ಮಸೂದೆ ಕುರಿತ ಸಮಸ್ಯೆಗಳನ್ನು ಬಗೆಹರಿಸಲೇಬೇಕಿದ್ದು ನಾವು ಸಮಿತಿಯನ್ನು ರಚನೆ ಮಾಡುತ್ತಿದ್ದೇವೆ. ಪ್ರತಿಭಟನೆ ನಡೆಸುವುದೇ ಆದರೆ, ನಡೆಸಿ ಎಂದು ರೈತರಿಗೆ ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.

ಇನ್ನು ಮುಂದಿನ ಆದೇಶದವರೆಗೆ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸುಪ್ರೀಂಕೋರ್ಟ್ ತಡೆನೀಡಿದ್ದು ಸಮಸ್ಯೆ ಇತ್ಯಾರ್ಥಕ್ಕೆ ನಾಲ್ವರು ತಜ್ಞರನ್ನೊಳಗೊಂಡ ಸಮಿತಿಯನ್ನ ರಚನೆ ಮಾಡಿದೆ.

ಹಾಗೆಯೇ ಸಮಸ್ಯೆ ಇತ್ಯಾರ್ಥಕ್ಕೆ ತಜ್ಞರ ಸಮಿತಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.  ಈ ಮೂಲಕ ಕೃಷಿ ತಿದ್ದುಪಡಿ ಕಾಯ್ದೆ  ವಿರೋಧಿಸಿ ಕಳೆದ 45 ದಿನಗಳಿಂದ ಹೋರಾಟ ನಡೆಸುತ್ತಿದ್ದ ರೈತರಿಗೆ ಗೆಲುವು ಸಿಕ್ಕಂತಾಗಿದೆ.

ENGLISH SUMMARY…

Setback for Central govt.: SC stays three amended agri policies and orders formation of expert committee
New Delhi, Jan. 12, 2021 (www.justkannada.in): The Central Govt. has suffered a setback on its amendment of agriculture policy as the Hon’ble Supreme Court has issued stay orders for three amended Agri policies and form an expert committee.stay-three Agricultural Amendment act-supreme court- central government
The Hon’ble Supreme Court, after conducting the trial of the applications submitted against the controversial amended agricultural policy of the Govt. of India informed that the problem relating to the new agriculture policy needs to be addressed, and hence the formation of a committee is necessary. It also informed the protestors to continue their protest if they want to.
Accordingly, the SC has given stay orders for three amended agriculture policies and has formed a four-member expert committee to settle the issue. The farmers who are protesting for the last 45 days have gained a upper hand.
Keywords: New agriculture policy/ amended agri policy/ Govt. of India/ SC/ stay order

Key words: stay-three Agricultural Amendment act-supreme court- central government