ಎಚ್ ಎಸ್ ದೊರೆಸ್ವಾಮಿ ಕುರಿತು ಹೇಳಿಕೆ ವಿಚಾರ: ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟಿಸುವಂತೆ ಈಶ್ವರ್ ಖಂಡ್ರೆ ಆಗ್ರಹ… 

ಬೀದರ್,ಫೆ,26,2020(www.justkannada.in): ಎಚ್ ಎಸ್ ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ.  ಅವರು ಪಾಕ್ ಏಜೇಂಟ್ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ  ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್  ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.

ಬೀದರ್ ನಲ್ಲಿ ಮಾಧ್ಯಮಗಳ ಜತೆ ಮಾತನಾಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಆಕ್ರೋಶ ಹೊರ ಹಾಕಿದ ಕೆಪಿಸಿಸಿ ಕಾರ್ಯಾಧ್ಯಕ್ಷ  ಈಶ್ವರ ಖಂಡ್ರೆ, ನಕಲಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಯತ್ನಾಳ್ ಹುಚ್ಚುಚ್ಚಾಗಿ ಹೇಳುತ್ತಾರೆ. ಇವರ ಈ ಹೇಳಿಕೆ ಖಂಡನೀಯ. ಬಿಜೆಪಿಯ ಯತ್ನಾಳ್ ಹೇಳಿಕೆ.. ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಅಷ್ಟೆ ಅಲ್ಲ 130 ಕೋಟಿ ಜನರಿಗೆ ಮಾಡಿದ ಅವಮಾನ. ಇದೊಂದು ದೇಶದ್ರೋಹದ ಹೇಳಿಕೆ. ಯತ್ನಾಳ್ ಅವರು ಮನುಷ್ಯ ಜಾತಿಗೆ ಸೇರಿದವರಲ್ಲ. ಒಬ್ಬ ವಯೋವೃದ್ದರಿಗೆ ಈ ರೀತಿ ಅವಮಾನ ಮಾಡಿದ್ದು ಅತ್ಯಂತ ಲಜ್ಜೆತನ. ಹೀಗಾಗಿ ಬಿಜೆಪಿ, ಯತ್ನಾಳ್ ರನ್ನ ಪಕ್ಷದಿಂದ ಶಾಸಕ ಸ್ಥಾನದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.

ದೆಹಲಿ ಹಿಂಸಾಚಾರ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ,  ಸಿಎಎ ವಿರೋಧಿಸಿ ದೆಹಲಿ ಹಿಂಸಾಚಾರ ಹಿನ್ನಲೆ, ಬಿಜೆಪಿ ಧರ್ಮ ವಿರೋಧವಾದ ತಿದ್ದುಪಡಿ ಕಾಯ್ದೆ ತಂದಿದೆ. ಹಿಂಸಾಚಾರ ನಡೆಸಿಸುತ್ತಿದ್ದು ಸಾಮಾನ್ಯ ಜನರ ಹತ್ಯೆಯಾಗ್ತಾ ಇದೆ. ಬಿಜೆಪಿ ವಿರುದ್ಧ ಯಾರಾದರೂ ಮಾತನಾಡಿದರೆ ಅವರ ಧ್ವನಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿಯವರು ಯಾರನ್ನು ಬಿಡಲ್ಲ.. ಮಕ್ಕಳಾಗಲಿ ಪತ್ರಕರ್ತರಾಗಲಿ ಮಹಿಳೆಯರ ಆಗಲಿ ಯಾರನ್ನ ಬಿಡಲ್ಲ. ಕೇಂದ್ರ ಸರ್ಕಾರದವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: Statement – H. S. Doreswamy-Basanagowda Patil Yatnal – Ishwar Khandre -demands