ಕುಕ್ಕರ್ ಬ್ಲಾಸ್ಟ್ ಕುರಿತು ಹೇಳಿಕೆ: ಡಿಕೆ ಶಿವಕುಮಾರ್ ಕ್ಷಮೆ ಕೇಳಲು ಮಾಜಿ ಸಿಎಂ ಬಿಎಸ್ ವೈ ಆಗ್ರಹ.

ಮಂಡ್ಯ,ಡಿಸೆಂಬರ್,16,2022(www.justkannada.in): ವೋಟರ್ ಐಡಿ ಹಗರಣ ಮುಚ್ಚಿಹಾಕಲು ಕುಕ್ಕರ್ ಬ್ಲಾಸ್ಟ್ ಷಡ್ಯಂತ್ರ ಎಂಬ ಹೇಳಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕ್ಷಮೆ ಕೇಳುವಂತೆ  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ  ಬಿಎಸ್ ಯಡಿಯೂರಪ್ಪ, ಡಿಕೆ ಶಿವಕುಮಾರ್ ಹೇಳಿಕೆ ಖಂಡಿಸುತ್ತೇನೆ. ಅವರು ಕೂಡಲೇ ಕ್ಷಮೆ ಕೇಳಬೇಕು. ಡಿಕೆಶಿ ತಲೆತಿರುಗಿ ಮಾತನಾಡುತ್ತಿದ್ದಾರೆ. ಏನು ಮಾತನಾಡಬೇಕು  ಎಂಬುದು ಡಿಕೆ ಶಿವಕುಮಾರ್ ಗೆ ಗೊತ್ತಾಗುತ್ತಿಲ್ಲ. ಯಾರನ್ನ ಬೆಂಬಲಿಸಿ ಮಾತನಾಡಬೇಕು ಎಂದು ತಿಳಿಯುತ್ತಿಲ್ಲ.

ಡಿಕೆ ಶಿವಕುಮಾರ್ ಮಾತು ಅವರಿಗೆ ತಿರುಗುಬಾಣವಾಗಲಿದೆ. ಡಿಕೆ ಶಿವಕುಮಾರ್ ಹೇಳಿಕೆಗೆ ಕಾಂಗ್ರೆಸ್ ನಿಲುವು ಸ್ಪಷ್ಟವಾಗಬೇಕು ಎಂದು ಬಿಎಸ್ ವೈ ಹೇಳಿದರು.

Key words: Statement – cooker blast-Former CM- BS Yeddyurappa -DK Shivakumar.