ರಾಜ್ಯದಲ್ಲಿ ರಿಯಲ್ ನೈಟ್ ಕರ್ಫ್ಯೂ ಅಗತ್ಯವಿದೆ ಎಂದ ಕಂದಾಯ ಸಚಿವ ಆರ್.ಅಶೋಕ್…

ಬೆಂಗಳೂರು,ಡಿಸೆಂಬರ್,30,2020(www.justkannada.in):  ದೇಶದಲ್ಲಿ  ಇತ್ತೀಚೆಗೆ ಹೊಸ ರೂಪಾಂತರಿ ಕೊರೊನಾ ವೈರಸ್ ಆತಂಕ ಸೃಷ್ಠಿಸಿದೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಈಗ ಮುಗಿದ ಅಧ್ಯಾಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ ಬೆನ್ನಲ್ಲೆ, ರಾಜ್ಯದಲ್ಲಿ ನೈಟ್ ಕರ್ಪ್ಯೂ ಕುರಿತಂತೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ರಿಯಲ್ ನೈಟ್ ಕರ್ಫ್ಯೂ ಅಗತ್ಯವಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ.ರಾಜ್ಯದಲ್ಲಿ ಬಿಗಿ ಕ್ರಮ ಕೈಗೊಳ್ಳುವ ಸಂಬಂಧ ಸಿಎಂ ಜತೆ ಚರ್ಚೆ ಮಾಡುತ್ತೇನೆ. ಸದ್ಯ  ಸರ್ಕಾರದ ಮುಂದೆ ಲಾಕ್ ಡೌನ್ ಪ್ರಸ್ತಾಪ ಇಲ್ಲ. ಕೊರೊನಾ ಹೆಚ್ಚು ಇರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಬೇಕಾ? ಬೇಡ್ವಾ? ಎಂಬುದನ್ನು ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.state-needs-real-night-curfew-revenue-minister-r-ashok

ಶಾಲೆ ಆರಂಭ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಶಾಲೆ ಆರಂಭದ ಬಗ್ಗೆ ಗೊಂದಲಗಳಿರುವುದು ನಿಜ. ಈ ಸಂಬಂಧ ಸಿಎಂ ಮತ್ತು ಶಿಕ್ಷಣ ಸಚಿವರು ಚರ್ಚಿಸುತ್ತಾರೆ. ನಂತರ ಸಿಎಂ ಸ್ಪಷ್ಟ ನಿರ್ಧಾರ ತಿಳಿಸುತ್ತಾರೆ ಎಂದು ಹೇಳಿದರು.

Key words:  state -needs – real night curfew- Revenue Minister -R. Ashok.