ರಾಜ್ಯ ವಿಧಾನಸಭೆ ಹಿನ್ನೆಲೆ: ರೈತ ಸಂಘಟನೆಗಳಿಂದ ಪ್ರಣಾಳಿಕೆ ಬಿಡುಗಡೆ.

ಮೈಸೂರು,ಮಾರ್ಚ್,14,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ರೈತ ಸಂಘಟನೆಗಳಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತ ಸಂಘಟನೆ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

ಬಳಿಕ ಮಾತನಾಡಿದ ಕುರುಬೂರು ಶಾಂತಕುಮಾರ್, ರೈತರ ಹೆಸರನ್ನ ಹೇಳಿಕೊಂಡು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ. ಬಳಿಕ ನಮ್ಮ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ವಿಫಲವಾಗುತ್ತಾರೆ. ಆಗಾಗಿ ಈ ಬಾರಿಯ ಚುನಾವಣೆಯಲ್ಲಿ ನಾವು ಸಹ ರೈತರ ಸಮಸ್ಯೆ ಮತ್ತು ಬೇಡಿಕೆಯ ಕುರಿತು ಪ್ರಣಾಳಿಕೆಯನ್ನ ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಪ್ರಣಾಳಿಕೆಯನ್ನ ಯಾರು ಒಪ್ಪಿಕೊಂಡು ಬೆಂಬಲ ಸೂಚಿಸುತ್ತಾರೆ. ಅಂತಹ ಪಕ್ಷಗಳಿಗೆ ನಾವು ಬೆಂಬಲ ನೀಡುತ್ತೇವೆ ಎಂದರು.

ಇನ್ನು ಇದೆ ವೇಳೆ ಮೈಸೂರು ಬೆಂಗಳೂರು ಟೋಲ್ ವಿಚಾರವಾಗಿ ಮಾತನಾಡಿದ ಕುರುಬೂರು ಶಾಂತಕುಮಾರ್, ಹೈವೇ ಕಾಮಗಾರಿ ಇನ್ನ ಪೂರ್ಣಗೊಂಡಿಲ್ಲ. ರೈತರ ಭೂಮಿ ಪಡೆದ ಮೇಲೆ ಕೆಲ ರೈತರಿಗೆ ಪರಿಹಾರವನ್ನೇ ನೀಡಿಲ್ಲ. ರೈತರ ವಾಹನಗಳಿಗೆ ಶುಲ್ಕ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.

Key words: State- Legislative -Assembly -Release – Manifesto – Farmers- Organizations.