ಮತಗಳನ್ನ ಡಿಲೀಟ್ ಮಾಡಲು ಸಾಧ್ಯವಿಲ್ಲ: ಯಾವುದೇ ಅಕ್ರಮ ನಡೆದಿಲ್ಲ- ರಾಜ್ಯ ಚುನಾವಣಾ ಆಯೋಗ

ಬೆಂಗಳೂರು,ಸೆಪ್ಟಂಬರ್,19,2025 (www.justkannada.in):  ಅಳಂದ ಕ್ಷೇತ್ರದಲ್ಲಿ ಮತಗಳನ್ನ ಡಿಲೀಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಈ ಕುರಿತು ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾ ಅಧಿಕಾರಿ, ಯಾವುದೇ ಅಕ್ರಮ ನಡೆದಿಲ್ಲ, ಮತಗಳನ್ನ ಡಿಲೀಟ್ ಮಾಡಲು ಸಾಧ್ಯವಿಲ್ಲ. ತಪ್ಪಾದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಈಗಾಗಲೇ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ. ಮತದಾರರ ಹೆಸರುಗಳನ್ನು ಅಳಿಸುವಂತೆ ಕೋರಿ ಡಿಸೆಂಬರ್ 2022 ರಲ್ಲಿ ಫಾರ್ಮ್ -7 ನಲ್ಲಿ 6,018 ಅರ್ಜಿಗಳನ್ನು ಎನ್ವಿಎಸ್ಪಿ, ವಿಎಚ್‌ಎ ಮತ್ತು ಗರುಡಾ ಅಪ್ಲಿಕೇಶನ್ ಗಳ ಮೂಲಕ ಸಲ್ಲಿಸಲಾಗಿತ್ತು. ಪ್ರತಿ ಅರ್ಜಿಯ ಪರಿಶೀಲನೆ ನಡೆಸಲಾಗಿದ್ದು, ಕೇವಲ 24 ಅರ್ಜಿಗಳು ನೈಜವೆಂದು ಕಂಡುಬಂದಿತು. ಉಳಿದ 5,994 ಅರ್ಜಿಗಳು ತಪ್ಪಾಗಿದ್ದು ಅವುಗಳನ್ನ ತಿರಸ್ಕರಿಸಲಾಗಿದೆ. ನೈಜವಾದ 24 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಮುಖ್ಯಚುನಾವಣಾಧಿಕಾರಿ ತಿಳಿಸಿದ್ದಾರೆ.

Key words: Votes, cannot, deleted, State Election Commission