ರಾಜ್ಯ ಕಾಂಗ್ರೆಸ್ ವರ್ಗಾವಣೆ ದಂಧೆ ಮೂಲಕ ಹಣ ಸಂಗ್ರಹಿಸಿ ಹೈಕಮಾಂಡ್ ​ಗೆ ಕಳಿಸಲಿದೆ-ಮಾಜಿ ಸಚಿವ ಆರ್.ಅಶೋಕ್ ಆರೋಪ.

ಬೆಂಗಳೂರು,ಜುಲೈ,19,2023(www.justkannada.in):  ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ವರ್ಗಾವಣೆ ದಂಧೆ ಮೂಲಕ ಹಣ ಸಂಗ್ರಹಿಸಿ ಹೈಕಮಾಂಡ್ ​ಗೆ ಕಳಿಸಲಿದೆ ಎಂದು ಮಾಜಿ ಸಚಿವ ಆರ್​.ಅಶೋಕ್ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ವಿಪಕ್ಷಗಳು ಮಾಡಿಕೊಂಡ ಗುಂಪಿಗೆ ಇಂಡಿಯಾ ಎಂದು ಹೆಸರಿಟ್ಟಿದೆ. ಅದು ಇಂಡಿಯಾ ಅಲ್ಲ ಈಸ್ಟ್​ ಇಂಡಿಯಾ ಕಂಪನಿ ಇದ್ದಂತೆ. ಮುಂದೆ ನಡೆಯಲಿರುವ ಚುನಾವಣೆಗೆ ರಾಜ್ಯ ಕಾಂಗ್ರೆಸ್ ವರ್ಗಾವಣೆ ದಂಧೆ ಮೂಲಕ ಹಣ ಸಂಗ್ರಹಿಸಿ ಹೈಕಮಾಂಡ್​ಗೆ ಕಳಿಸಲಿದೆ  ಎಂದು ಕಿಡಿಕಾರಿದರು.

Key words: State -Congress -collect –money-transfer- former minister- R. Ashok