ಇಂದು ರಾಜ್ಯ ಬಜೆಟ್: ಜನರಲ್ಲಿ ಸಾಕಷ್ಟು ನಿರೀಕ್ಷೆ:14ನೇ ಬಾರಿಗೆ ಅಯವ್ಯಯ ಮಂಡಿಸಲು ಸಿಎಂ ಸಿದ್ಧರಾಮಯ್ಯ ಸಜ್ಜು..

ಬೆಂಗಳೂರು,ಜುಲೈ,7,2023(www.justkannada.in): ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿ, ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಸರ್ಕಾರದ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ.

ಸಿಎಂ ಸಿದ್ದರಾಮಯ್ಯ ಇಂದು 14ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ.  ಇಂದು 12 ಗಂಟೆಗೆ, 14ನೇ ಬಾರಿಗೆ ಬಜೆಟ್ ಮಂಡಿಸಲಿದ್ದು, ಇದು ಹೊಸ ಸರ್ಕಾರದ ಪೂರಕ ಬಜೆಟ್ ಆಗಿರಲಿದೆ. ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನ ನೀಡಿರುವ ಕಾಂಗ್ರೆಸ್ ಸರ್ಕಾರದ ಬಜೆಟ್ ಮೇಲೆ ರಾಜ್ಯದ ಜನರಿಗೆ ಸಾಕಷ್ಟು ನಿರೀಕ್ಷೆ ಗರಿಗೆದರಿವೆ.

ಗ್ಯಾರಂಟಿ ಜಾರಿ ಜೊತೆ ಆರ್ಥಿಕ ವ್ಯವಸ್ಥೆ ಸರಿದೂಗಿಸುವ ಬಜೆಟ್ ಇದಾಗಿದೆ. ಹಿಂದಿನ ಸರ್ಕಾರ 3.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿತ್ತು. ಈ ಬಾರಿ ಸಿದ್ದರಾಮಯ್ಯ ಮಂಡಿಸುವ ಬಜೆಟ್ ಗಾತ್ರ ಮತ್ತಷ್ಟು ಹೆಚ್ಚಾಗಲಿದೆ. ಈ ಮೂಲಕ ಗ್ಯಾರಂಟಿ ಜಾರಿ ಜೊತೆ ಇನ್ನೇಷ್ಟು ಭಾಗ್ಯ ಸಿಗಲಿದೆ ಕಾದು ನೋಡಬೇಕಿದೆ.

Key words: State –budget- today- CM Siddaramaiah – budget