ಅಕ್ಕಿ ಕೊಡಬೇಡಿ ಎಂದು ಕೇಂದ್ರಕ್ಕೆ ರಾಜ್ಯ ಬಿಜೆಪಿ ನಾಯಕರೇ ಹೇಳಿದ್ದಾರೆ- ಸಚಿವ ರಾಮಲಿಂಗರೆಡ್ಡಿ ಆರೋಪ.

ಬೆಂಗಳೂರು,ಜೂನ್,20,2023(www.justkannada.in): ಅಕ್ಕಿ ಕೊಡಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ನಾಯಕರೇ ಹೇಳಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆರೋಪ ಮಾಡಿದ್ದಾರೆ.

ಇಂದು ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಇಂದು ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ರಾಜ್ಯಕ್ಕೆ 10 ಕೆಜಿ ಅಕ್ಕಿ ಕೊಡಬೇಡಿ ಎಂದು ರಾಜ್ಯ ಬಿಜೆಪಿ ನಾಯಕರೇ ಕೇಂದ್ರಕ್ಕೆ ಹೇಳಿದ್ದಾರೆ.  ಬಿಜೆಪಿ ಬಡವರ ಪರ ಇಲ್ಲ. 10 ಕೆಜಿಯಲ್ಲಿ 1ಗ್ರಾಂ ಕಡಿಮೆಯಾದರೂ ಬಿಡಲ್ಲ ಎನ್ನುತ್ತಿದ್ದಾರೆ. ಬಿಜೆಪಿಯವರು ಬಡವರ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಸೋನಾ ಮಸೂರಿ ಅಕ್ಕಿ ತಿನ್ನುತ್ತಿದ್ದಾರೆ. ಬಡವರು ತಿನ್ನುವ ಅಕ್ಕಿಯನ್ನು ಬಿಜೆಪಿಯುವರು ತಿನ್ನಲ್ಲ.  ಅಕ್ಕಿ ಬದಲು ಹಣ ನೀಡಿ ಅನ್ನುತ್ತಿದ್ದಾರೆ.  ಹಾಗಾದ್ರೆ ಅಕ್ಕಿ ಬದಲು ಹಣ ತಿನ್ನಲು ಆಗುತ್ತಾ..?  ಎಂದು ಸಚಿವ ರಾಮಲಿಂಗರೆಡ್ಡಿ  ಹರಿಹಾಯ್ದರು.

Key words: State -BJP -leaders –told- Center – rice – Minister -Ramalingareddy