ನಾಳೆ ರಾಜ್ಯಕ್ಕೆ ಅರುಣ್ ಸಿಂಗ್ ಆಗಮನ: ಸಚಿವಾಕಾಂಕ್ಷಿಗಳಿಗೆ ಸಿಹಿಸುದ್ದಿ…?

ಬೆಂಗಳೂರು,ಜನವರಿ,1,2021(www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆಗೆ ಹಲವು ಅಡ್ಡಿ ಆತಂಕಗಳು ಉಂಟಾಗಿದ್ದು ಪದೇ ಪದೇ ಮುಂದೂಡಿಕೆಯಾಗುತ್ತಲೇ ಇದೆ. ಇದರಿಂದಾಗಿ ಪ್ರತಿ ಭಾರಿ ಜಾತಕಪಕ್ಷಿಗಳಂತೆ ಕಾದು ಕುಳಿತಿರುವ ಸಚಿವಾಕಾಂಕ್ಷಿಗಳಿಗೆ ನಿರಾಸೆಯಾಗುತ್ತಲೇ ಇದೆ.jk-logo-justkannada-mysore

ಈ ಮಧ್ಯೆ ನಾಳೆ ಸಚಿವಾಕಾಂಕ್ಷಿಗಳಿಗೆ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆಯೇ ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಸಚಿವಾಕಾಂಕ್ಷಿಗಳಿಗೆ ಹೊಸ ವರ್ಷಕ್ಕೆ ಸಿಹಿಸುದ್ದಿ ಇದ್ಯಾ..? ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ನಾಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬರ್ತಿದ್ದಾರೆ: ಏನ್ ಸುದ್ದಿ ತರ್ತಾರೆ ನೋಡೋಣ ಎಂದಿದ್ದಾರೆ.state- bjp-in charge –arun singh- tomorrow-CM BS Yeddyurappa.

ರಾಜ್ಯಪಾಲರ ಭೇಟಿ: ಶುಭಾಶಯ….

ಇನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನ ಭೇಟಿಯಾಗಿ ರಾಜ್ಯಪಾಲರಿಗೆ ಹೊಸ ವರ್ಷದ ಶುಭಾಶಯ ತಿಳಿಸಿದರು.

Key words:  state- bjp-in charge –arun singh- tomorrow-CM BS Yeddyurappa.