ಮೆಟ್ರೋ 2ನೇ ಹಂತದ ಎಲ್ಲಾ ಕಾಮಗಾರಿಗಳು ಆರಂಭ: 2024ರ ವೇಳೆಗೆ ಪೂರ್ಣ – ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

ಬೆಂಗಳೂರು, ಜು,30,2020(www.justkannada.in): ಮೆಟ್ರೋ 2ನೇ ಹಂತದ ಎಲ್ಲಾ ಕಾಮಗಾರಿಗಳು ಆರಂಭವಾಗಿದ್ದು, 2024ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.start-ll-works-metro-2nd-level-full-2024-cm-bs-yeddyurappa

ಇಂದು  ಅಬ್ದುಲ್‍ಭಾರಿ ಹೈಸ್ಕೂಲ್ ಮೈದಾನ, ಸುಲ್ತಾನಾ ಗುಂಟಾ, ಶಿವಾಜಿನಗರ ಇಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ವತಿಯಿಂದ  ಆಯೋಜಿಸಿದ್ದ ಬೆಂಗಳೂರು ಮೆಟ್ರೋ ಹಂತ-2 ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಮತ್ತು ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸುರಂಗ ಮಾರ್ಗಕ್ಕೆ  ಮುಖ್ಯಮಂತ್ರಿ ಶ್ರೀ ‌ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದರು. start-ll-works-metro-2nd-level-full-2024-cm-bs-yeddyurappa

ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತಾನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ,  ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ಸಹಕಾರಿ. ಬೆಂಗಳೂರು ಜಾಗತಿಕವಾಗಿ ಬೆಳೆದಿದೆ. ನಗರದ ರಸ್ತೆಗಳನ್ನ ಸ್ಮಾರ್ಟ್ ಸಿಟಿ ಯೋಜನೆಯಡಿ  ಪುನಶ್ಚೇತನ ಮಾಡಲಾಗುತ್ತದೆ. ಮೆಟ್ರೋ ಸುರಂಗ  ಮಾರ್ಗ ಕಾಮಗಾರಿಯನ್ನ 4 ಹಂತಗಳಲ್ಲಿ ವಿಂಗಡಣೆ ಮಾಡಲಾಗಿದೆ. ಮೆಟ್ರೋ 2ನೇ ಹಂತದ ಎಲ್ಲಾ ಕಾಮಗಾರಿಗಳು ಆರಂಭವಾಗಿದ್ದು, 2024ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

Key words: start -ll works – Metro -2nd level- Full -2024-CM BS Yeddyurappa