ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ: ಶೆ.51.28ರಷ್ಟು ವಿದ್ಯಾರ್ಥಿಗಳು ಪಾಸ್…

ಬೆಂಗಳೂರು, ಅಕ್ಟೋಬರ್ 16,2020(www.justkannada.in): ಇಂದು   ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಶೇ.51.28ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.sslc-supplementary-examination-result-published-51-28-students-pass

ಎಸ್ ಎಸ್ ಎಲ್ ಸಿ  ಪೂರಕ ಪರೀಕ್ಷೆಯು ಸೆಪ್ಟೆಂಬರ್ 21 ರಿಂದ 29ರವರೆಗೆ  ನಡೆದಿತ್ತು. ಇದೀಗ ಇಂದು ಫಲಿತಾಂಶ ಪ್ರಕಟಗೊಂಡಿದ್ದು 51.28 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪರೀಕ್ಷೆಗೆ 2,13,955 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 1,09,719  ಉತ್ತೀರ್ಣರಾಗಿದ್ದಾರೆ.  ವಿದ್ಯಾರ್ಥಿಗಳು karresults.nic.in ನಲ್ಲಿ ಪೂರಕ ಪರೀಕ್ಷೆ ಫಲಿತಾಂಶ ವೀಕ್ಷಿಸಬಹುದು.

Key words: SSLC -Supplementary Examination- Result –Published- 51.28% – students -pass.