SSLC Result: 15ನೇ ಸ್ಥಾನಕ್ಕೆ ಕುಸಿದ ಮೈಸೂರು

ಮೈಸೂರು,ಮೇ,2,2025 (www.justkannada.in):  ಇಂದು 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು  ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು 15 ನೇ ಸ್ಥಾನಕ್ಕೆ ಕುಸಿದಿದೆ.

ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ 68.39 ರೊಂದಿಗೆ ಮೈಸೂರು 15ನೇ ಸ್ಥಾನಕ್ಕೆ  ಕುಸಿತ ಕಂಡಿದೆ. ಜಿಲ್ಲೆಯಲ್ಲಿ  ಒಟ್ಟು 35,264 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 24,116 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಳೆದ ವರ್ಷ ಮೈಸೂರು ಜಿಲ್ಲೆ 7 ಸ್ಥಾನ ಪಡೆದಿತ್ತು ಈ ಬಾರಿ ದಿಢೀರ್ 15ನೇ ಸ್ಥಾನಕ್ಕೆ ಕುಸಿದಿದೆ. ಮೈಸೂರಿನ ಭಾರತೀಯ ವಿದ್ಯಾಮಂದಿರ ತಾನ್ಯ, ಮರಿಮಲ್ಲಪ್ಪ ಶಾಲೆಯ  ಧನುಷ್ 625 ಕ್ಕೆ 625 ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ಡಿಡಿಪಿಐ ಜವರೇಗೌಡ ಮಾಹಿತಿ ನೀಡಿದರು.

Key words: SSLC Result,  Mysore, 15th position