ಶ್ರೀರಾಮುಲು ಅವರೇ, ಸಿಎಂ ಪುತ್ರನ ಸೇವೆ ಮಾಡಿಕೊಂಡಿರಿ : ರಾಜ್ಯ ಕಾಂಗ್ರೆಸ್ ಟ್ವೀಟ್

ಬೆಂಗಳೂರು,ಏಪ್ರಿಲ್,05,2021(www.justkannada.in) : ಹಿಂದುಳಿದ ವರ್ಗಗಳ ನಿಗಮಗಳಿಗೆ ಬಜೆಟ್‌ನಲ್ಲಿ ತೀವ್ರ ಅನ್ಯಾಯವಾಗಿದೆ, ಅದರ ಬಗ್ಗೆ ಧ್ವನಿ ಎತ್ತಿ. ಇಲ್ಲವಾದಲ್ಲಿ ಸಿಎಂ ಪುತ್ರನ ಸೇವೆ ಮಾಡಿಕೊಂಡಿರಿ, ಅವರು ಬೆಳೆಯುತ್ತಾರೆ, ನೀವು ಅಳಿಯುತ್ತೀರಿ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.

ಶ್ರೀರಾಮುಲು ಅವರೇ, ನನ್ನನ್ನು ಡಿಸಿಎಂ ಮಾಡು ಎಂದು ದೇವರಿಗೆ ಲೆಟರ್ ಬರೆದಿದ್ದು ನೀವೇ ಅಲ್ಲವೇ? ಹಿಂದುಳಿದ ವರ್ಗದವನು ಎಂದು ನನ್ನನ್ನು ಬಿಜೆಪಿಯವರೇ ಸೋಲಿಸಿದರು ಎಂದು ಹೇಳಿದ್ದು ನೀವೇ ಅಲ್ಲವೇ? ದೇವರಿಗೆ ಅಷ್ಟೇ ಅಲ್ಲ ಮೋದಿಯವರಿಗೆ ಲೆಟರ್ ಬರೆದರೂ ನಿಮ್ಮನ್ನು ಡಿಸಿಎಂ ಮಾಡುವುದಿಲ್ಲ ಬಿಜೆಪಿ ಪಕ್ಷ ಎಂದು ಟೀಕಿಸಿದೆ.

Sriramulu-son-CM-Serve-State-Congress-tweetಅವಕಾಶ ಸಿಕ್ಕರೆ ಸೂಪರ್ ಸಿಎಂ ಬಿ.ವೈ.ವಿಜಯೇಂದ್ರ ಅವರನ್ನು ಡೆಪ್ಯುಟಿ ಸಿಎಂ ಮಾಡಬಲ್ಲರು ಹೊರತು ನಿಮ್ಮನ್ನು ಮಾಡುವುದಿಲ್ಲ ಎಂದು ತಿಳಿಸಿದೆ.

key words : Sriramulu-son-CM-Serve-State-Congress-tweet