ಕೆಎನ್ ರಾಜಣ್ಣ ಬದಲು ಜಮೀರ್ ಇದ್ದಿದ್ರೆ ವಜಾ ಮಾಡುತ್ತಿದ್ರಾ? ಮಾಜಿ ಸಚಿವ ಶ್ರೀರಾಮುಲು ಕಿಡಿ

ಬೆಂಗಳೂರು,ಆಗಸ್ಟ್,13,2025 (www.justkannada.in):  ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ಅವರನ್ನ ವಜಾ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಶ್ರೀರಾಮುಲು,   ಪರಿಶಿಷ್ಟ ಪಂಗಡದವರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ರಾಜಣ್ಣ ಏನು ತಪ್ಪು ಮಾಡಿದರು. ರಾಜಣ್ಣ ಒಳ್ಳೇಯ ಕೆಲಸ ಮಾಡಿದ್ದಾರೆ . ರಾಜಣ್ಣ ಪರವಾಗಿ ಇಡಿ ಸಮಾಜ ನಿಲ್ಲುತ್ತದೆ . ಕೆ.ಎನ್ ರಾಜಣ್ಣ ಬದಲು ಜಮೀರ್ ಇದ್ದಿದ್ರೆ ವಜಾ ಮಾಡುತ್ತಿದ್ರಾ?  ಎಂದು ವಾಗ್ದಾಳಿ ನಡೆಸಿದರು.

ಈ ಹಿಂದೆ ವಿರೇಂದ್ರ ಪಾಟೀಲ್ ದೇವರಾಜ ಅರಸು ವಜಾ ಮಾಡಿದ್ರು.  ಈಗ ಕೆಎನ್ ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಲಾಗಿದೆ.  ರಾಜಣ್ಣ ನೀವು ಬಿಜೆಪಿಗೆ ಬನ್ನಿ ಸ್ವಾಗತ ಮಾಡುತ್ತೇವೆ. ಬಿಜೆಪಿಯಲ್ಲಿ ನಮಗಿಂತಲೂ ಉನ್ನತ ಸ್ಥಾನಮಾನ ನೀಡುತ್ತೇವೆ ನೀವು ಯಾವುದೇ ಕಾರಣಕ್ಕೂ ಭಯ ಪಡಬೇಡಿ ಎಂದು ಶ್ರೀರಾಮುಲು ತಿಳಿಸಿದರು.

Key words: KN Rajanna, Dismiss, Former Minister, Sriramulu