ಲಾಕ್ ಡೌನ್ ಎಫೆಕ್ಟ್! ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ ಕಿರುತೆರೆ ನಟ ಶ್ರೀನಾಥ್ ವಸಿಷ್ಠ

0
201

ಬೆಂಗಳೂರು, ಜುಲೈ 14, 2020 (www.justkannada.in): ಹಿರಿಯ ನಟ ಶ್ರೀನಾಥ್ ವಸಿಷ್ಠ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದಾರೆ.

ಶ್ರೀನಾಥ್ ವಸಿಷ್ಠ ಅಪಾರ್ಟ್‍ಮೆಂಟ್‍ನಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಇತರ ಸಿಬ್ಬಂದಿ ಕೂಡ ಕ್ವಾರಂಟೈನ್ ಆಗಿದ್ದಾರೆ.

ಇದರಿಂದ ಆ ಅಪಾರ್ಟ್‍ಮೆಂಟ್‍ನಲ್ಲಿ ವಾಸ ಮಾಡುತ್ತಿರುವ ನಿವಾಸಿಗಳೇ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನು ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಹೀಗಾಗಿ ನಟ ಶ್ರೀನಾಥ್ ವಸಿಷ್ಠ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಟ ಶ್ರೀನಾಥ್ ವಸಿಷ್ಠ ಫೇಸ್‍ಬುಕ್ ಪೇಜಿನಲ್ಲಿ ಹಂಚಿಕೊಂಡಿದ್ದಾರೆ.