ಮೈಸೂರು: ಶ್ರೀಕೃಷ್ಣಧಾಮದಲ್ಲಿ ರಾಯರ  354ನೇ ಆರಾಧನೋತ್ಸವ ಸಂಭ್ರಮ

ಮೈಸೂರು,ಆಗಸ್ಟ್,11,2025 (www.justkannada.in): ಮೈಸೂರಿನ ಸರಸ್ವತಿಪುರಂನಲ್ಲಿರುವ  ಶ್ರೀ ಕೃಷ್ಣಧಾಮದಲ್ಲಿ ಶ್ರೀ ಕೃಷ್ಣಾಪುರ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ  ಶ್ರೀ ರಾಘವೇಂದ್ರ ಗುರು ಸಾರ್ವಭೌಮರ  354ನೇ ಆರಾಧನಾ ಮಹೋತ್ಸವ  ಅದ್ದೂರಿಯಾಗಿ  ಆಚರಿಸಲಾಯಿತು.

ಬೆಳಗ್ಗೆ 7ಕ್ಕೆ  ರಾಯರಿಗೆ ಪಂಚಾಮೃತ ಅಭಿಷೇಕ,  9:30ಕ್ಕೆ  ಪಾದಪೂಜೆ. ಕಣಕಾಭಿಷೇಕ,  11:30ಕ್ಕೆ ಅಲಂಕಾರ ಸೇವೆ, 12:30 ಕ್ಕೆ ಮಹಾಮಂಗಳಾರತಿ  ಹಾಗೂ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಸಂಜೆ 7.30ಕ್ಕೆ  ರಾಯರ ಪಲ್ಲಕ್ಕಿ ಸೇವೆ,  ರಾಜ  ಬೀದಿಯಲ್ಲಿ ರಥೋತ್ಸವ, ರಂಗ ಪೂಜೆ ತೊಟ್ಟಿಲು ಸೇವೆ  ನೆರವೇರಲಿದೆ.

ವಿಶೇಷವಾಗಿ  10ರಂದು  ದಾಸ ಲಹರಿ, 11ರಂದು  ನೃತ್ಯಂಜಲಿ, 12ರಂದು ಭಕ್ತಿ ಲಹರಿ   ನುರಿತ ಸಂಗೀತ  ವಿದ್ವಾನ್ ರಿಂದ ಸಂಗೀತ  ಹಾಗೂ ಭಜನಾ, ನೃತ್ಯ ಕಾರ್ಯಕ್ರಮವನ್ನು  ಆಯೋಜಿಸಿದ್ದು, ಪ್ರತಿದಿನ  ಸಾವಿರಾರು ಜನರಿಗೆ  ಪ್ರಸಾದ ವಿತರಿಸಲಾಗುತ್ತಿದೆ  ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ ತಿಳಿಸಿದರು

ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷಎನ್ ಗೋಪಾಲಕೃಷ್ಣನ್,  ಉಪಾಧ್ಯಕ್ಷ ಶ್ರೀವಾತ್ಸ ರಾವ್,  ಕಾರ್ಯದರ್ಶಿ ಪಿ ಜಿ ಗುರುಪ್ರಸಾದ್,  ಶ್ರೀ ಕೃಷ್ಣ ಟ್ರಸ್ಟ್  ಉಪಾಧ್ಯಕ್ಷ ರವಿ ಶಾಸ್ತ್ರಿ,  ಪಿ ಎಸ್ ಶೇಖರ್,  ಕೆ ವಿ ಶ್ರೀಧರ್,  ಮಾಜಿ ಅಧ್ಯಕ್ಷಮೋಹನ್,  ಸೇರಿದಂತೆ  ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

Key words: Mysore, Sri Krishna Dham, Raghavendra swami, 354th Aradhanathsava