Thursday, August 13, 2026

BDA Apartments

Home Front Page “ಸ್ಪೋರ್ಟ್ಸ್ ಹಾಸ್ಟೆಲ್ ಗೆ ಸಚಿವ ಡಾ.ನಾರಾಯಣಗೌಡ ದಿಢೀರ್ ಭೇಟಿ ; ಅಧಿಕಾರಿಗಳಿಗೆ ತರಾಟೆ”

“ಸ್ಪೋರ್ಟ್ಸ್ ಹಾಸ್ಟೆಲ್ ಗೆ ಸಚಿವ ಡಾ.ನಾರಾಯಣಗೌಡ ದಿಢೀರ್ ಭೇಟಿ ; ಅಧಿಕಾರಿಗಳಿಗೆ ತರಾಟೆ”

ಮೈಸೂರು,ಫೆಬ್ರವರಿ,06,2021(www.justkannada.in) : ಮೈಸೂರಿನ ಕ್ರೀಡಾ ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಸ್ವಚ್ಚತೆ, ಸಿಬ್ಬಂದಿಯ ಕರ್ತವ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.jk

ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಇರುವ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿದ ಸಚಿವರು, ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳ ಜೊತೆ ಮಾತನಾಡಿ, ವ್ಯವಸ್ಥೆ ಬಗ್ಗೆ ಅವರಿಂದಲೇ ಮಾಹಿತಿ ಪಡೆದರು.

ಹಾಸ್ಟೇಲ್ ನಲ್ಲಿ ಸ್ವಚ್ಚತೆ ಸರಿಯಾಗಿ ಇರಬೇಕು, ಕೆಲ ಸಿಬ್ಬಂದಿಗಳು ಗೈರಾಗಿದ್ದಾರೆ. ಪ್ರತಿನಿತ್ಯವೂ ಹೀಗೆ ಮಾಡ್ತಿದ್ದಾರ?, ಮನಸ್ಸಿಗೆ ಬಂದಂತೆ ಕೆಲಸ ಮಾಡಿದ್ರೆ ಸುಮ್ಮನಿರಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.Sports Hostel,Minister,Dr.Narayana Gowda,Visit,Quarrel,officials ಊಟ ತಿಂಡಿ ವ್ಯವಸ್ಥೆ ಜೊತೆಗೆ ಕ್ರೀಡಾ ತರಬೇತಿ ಬಗ್ಗೆಯೂ ವಿಚಾರಿಸಿದರು. ಬಳಿಕ ಊಟದ ಕೋಣೆಗೆ ತೆರಳಿ, ಪರಿಶೀಲಿಸಿದರು. ಕ್ರೀಡಾ ವಿದ್ಯಾರ್ಥಿಗಳಿಗೆ ಉತ್ತಮ ಕ್ರೀಡಾ ತರಬೇತಿ ನೀಡಬೇಕು, ಊಟ ವಸತಿಯಲ್ಲೂ ಯಾವುದೇ ಕೊರತೆಯಾಗಬಾರದು. ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲು ಸಿದ್ದ, ನಿಮ್ಮಿಂದ ಉತ್ತಮ ಕೆಲಸ ಆಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

key words : Sports Hostel-Minister-Dr.Narayana Gowda-Visit-Quarrel-officials