ಚಾಮರಾಜನಗರ, ಸೆ.೦೫,೨೦೨೫ : ಜಿಲ್ಲೆಯಲ್ಲಿನ ವಾಕ್ ಮತ್ತು ಶ್ರವಣ ಸಮಸ್ಯೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಹಾಗೂ ತರಬೇತಿ ನೀಡುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಲು ಜಿಲ್ಲಾಡಳಿತ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಚಾ.ನಗರ ಜಿಲ್ಲಾಡಳಿತ “ಪ್ರಯಾಸ್ (PrAYAS)” ಎಂಬ ವಿನೂತನ ಯೋಜನೆಯನ್ನು ಅಂಕನವಾಡಿ ಮಕ್ಕಳಿಗೆ ವಾಕ್ ಮತ್ತು ಶ್ರವಣ ಸಮಸ್ಯೆಗಳನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಿ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಮೈಸೂರಿನ ಆಯಿಷ್ (All India Institute of Speech and Hearing, Mysuru) ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ.
ಈ ರೀತಿಯಾದ ವಿನೂತನ ಒಪ್ಪಂದ ರಾಜ್ಯದಲ್ಲಿ ಇದೇ ಮೊದಲನೆಯದು. ಈ ಯೋಜನೆ ರೂವಾರಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು “ಜಸ್ಟ್ ಕನ್ನಡ” ಜತೆ ಮಾತನಾಡಿ ವಿವರಿಸಿದ್ದು ಹೀಗೆ…
ಈ ಯೋಜನೆಯ ಹೆಸರು “ಪ್ರಯಾಸ್ (PrAYAS)” — Program for Assessment of Young Children for Auditory & Speech Language. 6 ತಿಂಗಳಿಂದ 6 ವರ್ಷದವರೆಗೆ ಇರುವ ಮಕ್ಕಳಲ್ಲಿ ವಾಕ್-ಶ್ರವಣ ಸಮಸ್ಯೆಗಳನ್ನು ಗುರುತಿಸಿ, ವಾಕ್ (speech) ಮತ್ತು ಶ್ರವಣ (hearing) ತಜ್ಞರ ಮೂಲಕ ಉಚಿತ ಚಿಕಿತ್ಸೆ ಒದಗಿಸುವುದು.
ಇದಕ್ಕಾಗಿ ಚಾಮರಾಜನಗರ ಜಿಲ್ಲಾಡಳಿತ ಮತ್ತು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH, Mysuru) ನಡುವೆ ನಡೆದ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಅಂಗನವಾಡಿ ಮಕ್ಕಳಲ್ಲಿ ಸಂವಹನದ ಆರಂಭಿಕ ಅಡೆತಡೆಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿ, ಸೂಕ್ತ ಪರಿಹಾರ ಹಾಗು ಚಿಕಿತ್ಸೆ ನೀಡುವುದು ಉದ್ದೇಶ.
6 ತಿಂಗಳಿಂದ 6 ವರ್ಷದ ಮಕ್ಕಳಲ್ಲಿ ಮಾತನಾಡುವಿಕೆ ಮತ್ತು ಕೇಳುವಿಕೆ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಅಗತ್ಯವಿದ್ದರೆ ತಕ್ಷಣವೇ ಮೌಲ್ಯಮಾಪನ, ಚಿಕಿತ್ಸೆ ಮತ್ತು ಪುನಶ್ಚೇತನ ಸೌಲಭ್ಯ ಕಲ್ಪಿಸುವುದು ಯೋಜನೆ ಗುರಿ.
ಅಂಗಸಂಸ್ಥೆಗಳು:
ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH), ಮೈಸೂರು.
ಕಾರ್ಯಾಚರಣೆ ವಿಧಾನ:
ಪ್ರತಿ ಅಂಗನವಾಡಿ ಮಟ್ಟದಲ್ಲೂ ಮಕ್ಕಳನ್ನು ಸ್ಕ್ರೀನಿಂಗ್ ಮಾಡಲಾಗುತ್ತದೆ. ಗುರುತಿಸಲಾದ ಮಕ್ಕಳನ್ನು AIISH ತಜ್ಞರಿಗೆ ಕಳುಹಿಸಲಾಗುತ್ತದೆ. ಚಾಮರಾಜನಗರ ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಂದ 6 ತಿಂಗಳಿಂದ 6 ವರ್ಷದೊಳಗಿನ ೩೫ ಸಾವಿರ ಮಕ್ಕಳಿದ್ದಾರೆ. ಈ ಮಕ್ಕಳಲ್ಲಿನ ಮಾತು ಬಾರದ, ಕಿವಿ ಕೇಳದ ಸಮಸ್ಯೆ ಬಗೆಗೆ ಗಮನ ಹರಿಸುವ ಮೂಲಕ ಸಮಸ್ಯೆ ಪತ್ತೆ ಹಚ್ಚಲಾಗುತ್ತದೆ. ವಿಶೇಷವಾಗಿ ಗ್ರಾಮೀಣ ಹಾಗೂ ಹಿಂದುಳಿದ ಹಿನ್ನಲೆ ಮಕ್ಕಳಿಗೆ ಶ್ರವಣ/ಮಾತು ತೊಂದರೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಚಿಕಿತ್ಸೆಗೆ ಅವಶ್ಯಕವಿರುವ ಹಣಕಾಸಿನ ವ್ಯವಸ್ಥೆಯನ್ನು ದಾನಿಗಳ ನೆರವಿಂದ ಸಿ.ಎಸ್ಆರ್ ಫಂಡ್ ಮೂಲಕ ಭರಿಸಲು ಉದ್ದೇಶಿಸಲಾಗಿದೆ.
ತರಬೇತಿ :
ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳಲ್ಲಿನ ವಾಕ್ -ಶ್ರವಣ ಸಮಸ್ಯೆ ಪತ್ತೆ ಹಚ್ಚುವ ನಿಟ್ಟಿನಲ್ಲಿ ಬೇಸಿಕೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಮೈಸೂರಿ ಆಯಿಷ್ ಸಂಸ್ಥೆ ಕೈಜೋಡಿಸಿದ್ದು, ಜಿಲ್ಲೆಯ ಎಲ್ಲಾ ೧೪೪೪ ಅಂಗನವಾಡಿಕಾರ್ಯಕರ್ತೆಯರಿಗೆ ಆಯಿಷ್ ನಲ್ಲಿ ತರಬೇತಿ ನೀಡಲಾಗುತ್ತದೆ.
ಇದು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಜಿಲ್ಲಾಡಳಿತ – AIISH ಒಟ್ಟಾಗಿ ಕೈಗೊಂಡ ಪೈಲಟ್ ಪ್ರಾಜೆಕ್ಟ್ ಆಗಿದೆ. ಯಶಸ್ವಿಯಾಗಿದ್ದರೆ, ಇತರೆ ಜಿಲ್ಲೆಗಳಲ್ಲಿಯೂ ಜಾರಿಗೆ ತರಲಾಗುವುದು.
ರಾಷ್ಟ್ರೀಯ ಆರೋಗ್ಯ ಯೋಜನೆ:
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ ಅವರು “ ಜಸ್ಟ್ ಕನ್ನಡ” ಜತೆ ಮಾತನಾಡಿ, ಮಕ್ಕಳಲ್ಲಿನ ವಾಕ್ ಮತ್ತು ಶ್ರವಣ ಸಮಸ್ಯೆ ನಿವಾರಣೆಗೆ ರಾಷ್ಟ್ರೀಯ ಆರೋಗ್ಯ ಯೋಜನೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಚಾ.ನಗರ ಜಿಲ್ಲಾಡಳಿತದ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಅಂಗನವಾಡಿ ಮಕ್ಕಳಲ್ಲಿನ ವಾಕ್ -ಶ್ರವಣ ಸಮಸ್ಯೆ ಪತ್ತೆ ಹಚ್ಚುವ ಮೂಲಕ ಅದರ ನಿವಾರಣೆಗೆ ಮುಂದಾಗಿದ್ದೇವೆ.
ಅಂಗನವಾಡಿಗೆ ಬರುವ ಬಹುತೇಕ ಮಕ್ಕಳು ಆರ್ಥಿಕವಾಗಿ ಹಿಂದುಳಿದವರೇ ಆಗಿರುತ್ತಾರೆ. ಈ ಮಕ್ಕಳ ಪೋಷಕರಿಗೆ ವಾಕ್- ಶ್ರವಣ ಸಮಸ್ಯೆ ಬಗ್ಗೆ ಅರಿವಿರುವುದಿಲ್ಲ. ಆದ್ದರಿಂದ ನಾವೇ ಖುದ್ದು ಮಕ್ಕಳನ್ನು ಪರೀಕ್ಷಿಸಲು ಉದ್ದೇಶಿಸಿದ್ದು ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯಿಷ್ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯಲ್ಲಿ ಮೊದಲ ಹಂತದಲ್ಲಿ ಮಕ್ಕಳನ್ನು ಪರೀಕ್ಷಿಸುವುದು ಹೇಗೆ ಎಂಬ ಬಗ್ಗೆ ತಿಳಿಸಲಾಗುತ್ತದೆ. ಇದಕ್ಕಾಗಿ ಚೆಕ್ ಲಿಸ್ಟ್ ಸಿದ್ಧಪಡಿಸಿದ್ದು ಅದರಂತೆ ಮಕ್ಕಳನ್ನು ಪರೀಕ್ಷಿಸಲಾಗುತ್ತದೆ. ಈ ಹಂತದಲ್ಲಿ ಸಮಸ್ಯೆ ಕಂಡು ಬಂದಲ್ಲಿ ಮುಂದಿನ ಹಂತದ ಚಿಕಿತ್ಸಗೆ ಮೈಸೂರಿನ ಆಯಿಷ್ ಸಂಸ್ಥೆಗೆ ಕರೆತರಲಾಗುತ್ತದೆ. ಇಲ್ಲಿ ಪರಿಶೀಲನೆ ನಡೆಸಿದ ಬಳಿಕ ಥೆರಪಿ ಅಥವಾ ಚಿಕಿತ್ಸೆ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
key words: Speech and hearing problems, in children, Chamarajanagara, district administration, joins hands, AIISH, Mysore.
SUMMARY:
Speech and hearing problems in children: Chamarajanagara district administration joins hands with AIISH, Mysore.
Chamarajanagara district administration is taking steps to address the problem by identifying children with speech and hearing problems in the district and providing them with appropriate treatment and training at an early stage. In this context, the Chamaraja Nagar district administration has launched an innovative project called “PrAYAS” and has entered into an agreement with the All India Institute of Speech and Hearing, Mysuru, with the aim of identifying speech and hearing problems in children at an early stage and providing free treatment.