ಮೈಸೂರು,ಆಗಸ್ಟ್,16,2025 (www.justkannada.in): ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ತಮಿಳುನಾಡಿನ ತಿರುನೆಲ್ವೆಲಿ – ಶಿವಮೊಗ್ಗ ಟೌನ್ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ರೈಲು ಸಂಖ್ಯೆ. 06103 ತಿರುನಲ್ವೆಲಿಯಿಂದ ಆಗಸ್ಟ್ 17 2025, ಭಾನುವಾರ ಸಂಜೆ 4.20ಕ್ಕೆ ಹೊರಟು ಸೋಮವಾರ ಮಧ್ಯಾಹ್ನ 01.00 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ. ರೈಲು ಸಂಖ್ಯೆ. 06104 ಶಿವಮೊಗ್ಗ ಟೌನ್ ನಿಂದ ಆಗಸ್ಟ್ 18 2025, ಸೋಮವಾರ ಮಧ್ಯಾಹ್ನ 2.20ಕ್ಕೆ ಹೊರಟು ಮಂಗಳವಾರ ಬೆಳಗ್ಗೆ 10.45ಕ್ಕೆ ತಿರುನಲ್ವೆಲಿಗೆ ತಲುಪಲಿದೆ.
ಈ ರೈಲು ಎರಡು ಮಾರ್ಗಗಳಲ್ಲಿ ಕಲ್ಲಿದೈಕುರ್ಚಿ, ಅಂಬಾಸಮುದ್ರಂ, ಕಿಜಕಡೈಯಂ, ಪವೂರುಚತ್ರಂ, ತೆಂಕಾಸಿ ಜಂಕ್ಷನ್, ಕಡಯನಲ್ಲೂರು, ಶಂಕರನ್ಕೊವಿಲ್, ರಾಜಪಾಳಯಂ, ಶ್ರೀವಿಲ್ಲಿಪುತ್ತೂರು, ಶಿವಕಾಶಿ, ವಿರುದುನಗರ ಜಂಕ್ಷನ್, ಮದುರೈ ಜಂಕ್ಷನ್, ಕೊಡೈಕೆನಾಲ್ ರಸ್ತೆ, ದಿಂಡಿಗಲ್ ಜಂಕ್ಷನ್, ಕರೂರ್ ಜಂಕ್ಷನ್, ನಮಕ್ಕಲ್, ಸೇಲಂ ಜಂಕ್ಷನ್, ಕುಪ್ಪಂ, ಬಂಗಾರಪೇಟೆ ಜಂಕ್ಷನ್, ಕೃಷ್ಣರಾಜಪುರಂ, ಎಸ್‌ಎಂವಿಟಿ ಬೆಂಗಳೂರು, ಚಿಕ್ಕಬಾಣವರ, ತುಮಕೂರು, ಅರಸೀಕೆರೆ, ಬೀರೂರು, ತರೀಕೆರೆ ಮತ್ತು ಭದ್ರಾವತಿ ನಿಲ್ದಾಣಗಳಲ್ಲಿ ನೀಲುಗಡೆಗೊಳ್ಳಲಿದೆ.
ಈ ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಹೊಂದಿರಲಿದ್ದು ಟು ಟೈರ್ ಎಸಿ 1, ತ್ರಿ ಟೈರ್ ಎಸಿ 2, ಸ್ಲೀಪರ್ 9, ಜನರಲ್ 4, ಸಿಟ್ಟಿಂಗ್ ಕಮ್ ಲಗೇಜ್ ಕೋಚ್ – 2 ಬೋಗಿಗಳನ್ನು ಹೊಂದಿರುತ್ತದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕರು ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ ನೀಡಿದ್ದಾರೆ.
Key words: One trip, special train, between, Tirunelveli – Shimoga Town