ಸಿಎಂ ಸಿದ್ದರಾಮಯ್ಯ ವಿದಾಯದ ಭಾಷಣ ಮಾಡಲು ವಿಶೇಷ ಅಧಿವೇಶನ ಕರೆದಿದ್ದಾರೆ- ಬಿಜೆಪಿ ಶಾಸಕ

ಶಿವಮೊಗ್ಗ,ಜನವರಿ,19,2026 (www.justkannada.in): ಅಧಿವೇಶನ ಬಳಿಕ  ಸಿಎಂ ಬದಲಾವಣೆ ಆಗಬಹುದು. ಹೀಗಾಗಿ  ಸಿಎಂ ಸಿದ್ದರಾಮಯ್ಯ ವಿದಾಯದ ಭಾಷಣ ಮಾಡಲು ವಿಶೇಷ ಅಧಿವೇಶನ ಕರೆದಿದ್ದಾರೆ ಎಂದು ಬಿಜೆಪಿ ಶಾಸಕ ಎಸ್.ಎನ್ ಚನ್ನಬಸಪ್ಪ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಎನ್ ಚನ್ನಬಸಪ್ಪ, ಸಿಎಂಸಿದ್ದರಾಮಯ್ಯ ವಿಶೇಷ ಅಧಿವೇಶನ ಕರೆದಿದ್ದಾರೆ.  ಬಹುಶಃ ಇದು ಸಿದ್ದರಾಮಯ್ಯನವರ ಕೊನೇ ಅಧೀವೇಶನ ಆಗಬಹುದು. ಹೀಗಾಗಿ ಸಿಎಂ ತಮ್ಮ ಕೊನೆಯ ಭಾಷಣ ಮಾಡಲು ಈ ಅಧಿವೇಶನ ಕರೆದಿರಬಹುದು ವಿಶೇಷ ಅಧೀವೇಶನ ಬಳಿಕ ಸಿಎಂ ಬದಲಾವಣೆ ಆಗಬಹುದು ಈ ಮುಖ್ಯಮಂತ್ರಿಯಿಂದ ಅಭಿವೃದ್ದ ಮಾಡಲು ಸಾಧ್ಯವಿಲ್ಲ ಹೊಸದಾಗಿ ಬರುವ ಸಿಎಂ ಅಭಿವದ್ದಿ ಮಾಡಲಿ ಎಂದರು.

ಬಜೆಟ್ ಸಮಯದಲ್ಲಿ ನಡೆಸಬೇಕಾದ ಅಧಿವೇಶನವನ್ನು ಈಗ ಸಿಎಂ ಸಿದ್ದರಾಮಯ್ಯ ತರಾತುರಿಯಲ್ಲಿ ಕರೆದಿದ್ದಾರೆ. ಒಂದು ಯೋಜನೆ ವಿರೋಧಿಸಿಲು ಅಧಿವೇಶನ ಯಾರೂ ಕರೆಯಲ್ಲ. ಜಿ ರಾಮ್ ಜಿ ಯೋಜನೆ ವಿರೋಧಿಸಲು ಅಧಿವೇಶನ ಅಗತ್ಯವಿರಲಿಲ್ಲ. ಸಿಎಂ ವಿದಾಯದ ಭಾಷಣ ಮಾಡಲು ಅಧಿವೇಶನ ಕರೆದಿರಬಹುದು ಎಂದು ಶಾಸಕ ಎಸ್.ಎನ್ ಚನ್ನಬಸಪ್ಪ  ತಿಳಿಸಿದರು.

Key words: CM, Siddaramaiah, special session,  BJP,  MLA