ಬೆಂಗಳೂರು,ಆಗಸ್ಟ್,13,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ನಡೆಯುತ್ತಿದೆ. ಈ ಬಗ್ಗೆ ಸ್ವಯಂ ಅಭಿಪ್ರಾಯ ಬೇಡ ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ಕೇಳಿದ್ರು ಅವಕಾಶ ಮಾಡಿಕೊಡುತ್ತೇವೆ. ಶೂನ್ಯವೇಳೆಯಲ್ಲಿ ಅವಕಾಶ ನೀಡಲಾಗಿತ್ತು. ಸರ್ಕಾರವೂ ಅದಕ್ಕೆ ಉತ್ತರ ನೀಡಿದೆ ಎಂದರು.
ಪ್ರಕರಣ ಕುರಿತು ಎಸ್ ಐಟಿ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸ್ವಯಂ ಅಭಿಪ್ರಾಯ ಬೇಡ ಪೂರ್ಣ ತನಿಖೆಯಾಗುವವರೆಗೆ ಸಮಾಧಾನದಿಂದ ಇರಬೇಕು. ತನಿಖೆಗೂ ಮುನ್ನ ಮಾತನಾಡೋದು ಬೇಡ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದರು.
Key words: SIT, investigate, Dharmasthala, case, Speaker, UT Khader