ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡಿದ್ದೇ ಆದ್ರೆ ಎರಡು ಪಕ್ಷದಿಂದ ರಿವರ್ಸ್ ಅಪರೇಷನ್- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜು,6,2019(www.justkannada.in):  ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ಸ್ಪೀಕರ ರಾಜಿನಾಮೆ ಅಂಗೀಕಾರ ಮಾಡಿದ್ದೇ ಆದರೆ ಎರಡು ಪಕ್ಷದಿಂದ ರಿವರ್ಸ್ ಆಪರೇಶನ್ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

12 ಅತೃಪ್ತ ಶಾಸಕರು ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ  ರಾಜೀನಾಮೆ ಕೊಟ್ಟಿದ್ದು ಮಾದ್ಯಮಗಳಿಂದ ನನಗೆ ಗೊತ್ತಾಗಿದೆ, ಈಬಗ್ಗೆ ಅಂತಿಮವಾಗಿ ಸ್ಪೀಕರ್ ತಿರ್ಮಾನ ಕಾಯ್ದು  ನೋಡಬೇಕು, ರಾಜಿನಾಮೆ ಕೊಟ್ಟವರಲ್ಲಿ‌ ಮರಳಿ ತೆಗೆದುಕೊಳ್ಳುತ್ತಾರೆ, ಕೇವಲ ರಾಜಿನಾಮೆ ಕೊಟ್ಟಿದ್ದಾರೆ ಇನ್ನು ರಾಜೀನಾಮೆ ಅಂಗೀಕಾರವಾಗಬೇಕು, ಸಂಪೂರ್ಣವಾಗಿ ಸ್ಪಿಕರ ಕಚೇರಿಯಿಂದ ಅಧಿಕೃತವಾಗಿ ರಾಜಿನಾಮೆ ಕೊಟ್ಟಿದ್ದಾರೆ ಅಂತ ಹೊರ ಬರಬೇಕು, ಸ್ಪೀಕರ್  ರಾಜೀನಾಮೆಯನ್ನ ಅಂಗೀಕಾರ ಮಾಡ್ತಾರಾ, ಎಂಬುದನ್ನ ಕಾಯ್ದು ನೋಡಬೇಕು ಎಂದರು.

ಸರಕಾರದ ವಿಸರ್ಜನೆಯ ಬಗ್ಗೆ ವಿದಾನಸಭೆಯಲ್ಲಿ ಚರ್ಚೆ ಆಗಬೇಕು,  ಸರಕಾರ ಬಿಳುತ್ತೆ, ಅಥವಾ ಮೈತ್ರಿ ಆಗಿತ್ತಾ ಎಂಬುದನ್ನ ಕಾಯ್ದು ನೋಡಬೇಕು, ಕಾಂಗ್ರೆಸ್ ನವರು ಸುಮ್ನೆ ಕುಳಿತಿಲ್ಲ, ನಾನು ಬೆಳಗಾವಿಯಲ್ಲಿ ಆಪರೇಷನ್ ಮಾಡಲ್ಲ, ಅದಕ್ಕೆ ಬೆಂಗಳೂರಿನಲ್ಲಿ ಒಂದು ಟಿಮ್ ರೆಡಿ ಆಗಿದೆ.ಸ್ಪೀಕರ ರಾಜಿನಾಮೆ ಅಂಗೀಕಾರ ಮಾಡಿದ್ದೇ ಆದರೆ ಎರಡು ಪಕ್ಷದಿಂದ ರಿವರ್ಸ್  ಆಪರೇಷನ್ ಮಾಡುತ್ತೇವೆ. ಈಗಾಗಲೇ ಬೆಂಗಳೂರಿನಲ್ಲಿ ರಿವರ್ಸ್ ಆಪರೇಷನ್ ಗೆ ಟೀಮ್ ಕೆಲಸ ಮಾಡುತ್ತಿದೆ. ಅವರವರ ಸರಕಾರ ಉಳಿಸಿಕ್ಕೊಳ್ಳುವುದು ಅವರವರಿಗೆ ಗೊತ್ತಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Key words: Speaker –accepts- resignation -everse -operation – both parties – Minister -Satish Jarakiholi