ಎಸ್ ಪಿ ಬಿ ಸ್ಥಿತಿ ಗಂಭೀರ, ಎಲ್ಲವೂ ದೇವರ ಕೈನಲ್ಲಿದೆ : ನಿರ್ದೇಶಕ ಭಾರತಿ ರಾಜ್ ಬೇಸರ

ಬೆಂಗಳೂರು,ಸೆಪ್ಟೆಂಬರ್,25,2020(www.justkannada.in) : ಎಸ್,ಪಿ.ಬಿ ಗುಣಮುಖರಾಗಿ ಎದ್ದು ಬರ್ತಾರೆ ಎಂದು ಕೊಂಡಿದ್ದೆವು. ಆದರೆ, ಈಗ ಎಲ್ಲವೂ ದೇವರ ಕೈನಲ್ಲಿದೆ ಎಂದು ನಿರ್ದೇಶಕ ಭಾರತಿ ರಾಜ್ ಹೇಳಿದ್ದಾರೆ.jk-logo-justkannada-logo

ಗಾನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಅವರ ಸ್ಥಿತಿ ಗಂಭಿರವಾಗಿದ್ದು, ಕಳೆದ 24 ಗಂಟೆಯಲ್ಲಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿದ ನಿರ್ದೇಶಕ ಭಾರತಿ ರಾಜ್ ಎಸ್ ಪಿ ಅವರನ್ನು ನೋಡಿ ಹೊರಬಂದ ಬಳಿಕ ಅಳಲು ತೋಡಿಕೊಂಡಿದ್ದಾರೆ.

SPB status-hands-God-Director-Bharati Raj-bored

ನನ್ನ ದುಃಖವನ್ನು ಹೇಗೆ ವ್ಯಕ್ತಪಡಿಸಿಬೇಕು ಗೊತ್ತಾಗುತ್ತಿಲ್ಲ. ಎಸ್ ಪಿ ಬಿ ಗುಣಮುಖರಾಗಿ ಬರ್ತಾರೆ ಎಂದು ಕೊಂಡಿದ್ದೆವು. ಪ್ರಕೃತಿ ಮುಂದೆ ನಾವೇನು ಅಲ್ಲ. ಈಗ ಎಲ್ಲವೂ ದೇವರ ಕೈನಲ್ಲಿದೆ. 50 ವರ್ಷಗಳ ಕಾಲ ಗಾನಲೋಕದ ಅದ್ಭುತವಾಗಿದ್ದ ಅವರು ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇನ್ನು ಇದೆ ಎಂದು ತಿಳಿಸಿದ್ದಾರೆ.

key words : SPB status-hands-God-Director-Bharati Raj-bored