ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಅಧ್ಯಕ್ಷ ಕೆ. ವೇಣುಗೋಪಾಲ್ ರಾವ್ ನಿಧನ..

ಮೈಸೂರು,ಏಪ್ರಿಲ್,30,2021(www.justkannada.in): LICಯ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ವಿಮಾ ನೌಕರರ ಸಂಘಕ್ಕೆ ಸಂಬದ್ಧವಾಗಿರುವ ದಕ್ಷಿಣ  ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಅಧ್ಯಕ್ಷರಾಗಿದ್ದ  ಕೆ. ವೇಣುಗೋಪಾಲ್ ರಾವ್  ಅವರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದರು.jk

ಕೆ. ವೇಣುಗೋಪಾಲ್ ರಾವ್ ಅವರಿಗೆ 58 ವರ್ಷ ವಯಸ್ಸಾಗಿತ್ತು. ತೆಲಂಗಾಣ ರಾಜ್ಯದ ಕರೀಂನಗರ ದ LIC ವಿಭಾಗೀಯ ಕಚೇರಿ ಯಲ್ಲಿ ಕೆಲಸ ಮಾಡುತ್ತಿದ್ದ ಇವರು LIC ನೌಕರರ ಚಳುವಳಿಯ ಧೀಮಂತ ನಾಯಕರಲ್ಲಿ ಒಬ್ಬರಾಗಿದ್ದರು. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಮಾ ನೌಕರರ ಚಳುವಳಿಯನ್ನು ಬೆಳೆಸುವಲ್ಲಿ ಇವರ ಪಾತ್ರ ಗಣನೀಯವಾಗಿದೆ.south-insurance-employees-union-president-venugopal-rao-passes-away

ಉತ್ತಮ ಬರಹಗಾರರೂ ಆಗಿದ್ದ ಇವರು ಸಮಕಾಲೀನ ವಿಷಯಗಳ ಮೇಲೆ ನಿಯಮಿತವಾಗಿ ಲೇಖನಗಳನ್ನು ಬರೆಯುತ್ತಿದ್ದರು. ವಿಮಾ ನಿಗಮ ನೌಕರರ ಸಂಘ, ಮೈಸೂರು ವಿಭಾಗ ವೇಣುಗೋಪಾಲ್ ರಾವ್ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದೆ.

Key words: South- Insurance Employees -Union President -Venugopal Rao -passes away.