ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್: ರನ್’ಗಾಗಿ ಬ್ಯಾಟ್ಸ್’ಮನ್ ಗಳ ಪರದಾಟ !

ಬೆಂಗಳೂರು, ಜನವರಿ 12, 2022 (www.justkannada.in):ಕೊಹ್ಲಿ ಅರ್ಧಶತಕದ ಹೊರತಾಗಿಯೂ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 223 ರನ್​ಗಳಿಸಿ ಆಲೌಟ್​ ಆಗಿದೆ.

ಮೊದಲ ಇನಿಂಗ್ಸ್ ಆರಂಭಿಸಿದ್ದ ಆಫ್ರಿಕಾ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿದೆ. ಬ್ಯಾಟರ್ ಗಳು ಈ ಪಿಚ್ ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.

ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಬಿಟ್ಟರೆ ಉಳಿದವರು ಯಾರೂ ನಿಂತು ಆಡುವ ಛಾತಿಯೇ ತೋರಲಿಲ್ಲ. ಕೊಹ್ಲಿ 79 ರನ್ ಗಳ ಕೊಡುಗೆ ನೀಡಿದರೆ ಪೂಜಾರ 43 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ಇನಿಂಗ್ಸ್ ಆರಂಭಿಸಿದ ಆಫ್ರಿಕಾ ಕತೆಯೂ ಇದೇ ಆಗಿತ್ತು. ಆರಂಭದಲ್ಲೇ ದ್ವಿತೀಯ ಪಂದ್ಯದ ಹೀರೋ ಡೀನ್ ಎಲ್ಗರ್ ವಿಕೆಟ್ ನ್ನು ಜಸ್ಪ್ರೀತ್ ಬುಮ್ರಾ ಪಡೆದಿದ್ದಾರೆ.