ಹೋಂ ಕ್ವಾರಂಟೈನ್’ನಲ್ಲಿ ಸೌರವ್ ಗಂಗೂಲಿ

ಬೆಂಗಳೂರು, ಜುಲೈ 16, 2020 (www.justkannada.in): ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಸ್ವಯಂ ಕ್ವಾರಂಟೈನ್ ಗೊಳಗಾಗಲು ತೀರ್ಮಾನಿಸಿದ್ದಾರೆ.

ಸಹೋದರ ಸ್ನೇಹಶಿಷ್ ಗಂಗೂಲಿಗೆ ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಸೌರವ್ ಈ ನಿರ್ಧಾರ ಕೈಗೊಂಡಿದ್ದಾರೆ.
ಇತ್ತೀಚೆಗಷ್ಟೇ ಸ್ನೇಹಶಿಷ್ ಪತ್ನಿ, ತಂದೆಗೆ ಕೊರೋನಾ ದೃಢಪಟ್ಟಿತ್ತು. ಇದೀಗ ಬೆಂಗಾಳ ಕ್ರಿಕೆಟ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿಯೂ ಆಗಿರುವ ಸ್ನೇಹಶಿಷ್ ಗೆ ಕೊರೋನಾ ಪಾಸಿಟಿವ್ ಬಂದಿದೆ.

ಈ ಹಿನ್ನಲೆಯಲ್ಲಿ ಗಂಗೂಲಿ ಹೋಂ ಕ್ವಾರಂಟೈನ್ ಗೊಳಗಾಗಲು ನಿರ್ಧರಿಸಿದ್ದಾರೆ. ಸಹೋದರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.