Tuesday, September 22, 2026

BDA Apartments

ಸಿಎಂ ಆಯ್ಕೆ ಬಗ್ಗೆ ಸೋನಿಯಾ ಗಾಂಧಿ, ಖರ್ಗೆ ತೀರ್ಮಾನ- ಕೆಪಿಸಿಸಿ ಅಧ್ಯಕ್ಷ ಡಿ.ಕ...
Home Front Page ಸಿಎಂ ಆಯ್ಕೆ ಬಗ್ಗೆ ಸೋನಿಯಾ ಗಾಂಧಿ, ಖರ್ಗೆ ತೀರ್ಮಾನ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

ಸಿಎಂ ಆಯ್ಕೆ ಬಗ್ಗೆ ಸೋನಿಯಾ ಗಾಂಧಿ, ಖರ್ಗೆ ತೀರ್ಮಾನ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

ಬೆಂಗಳೂರು,ಮೇ,15,2023(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆದ್ದು ಬೀಗಿದ್ದು, ಹೊಸ ಸರ್ಕಾರ ರಚನೆಗಾಗಿ ಭಾರೀ ಕಸರತ್ತುಗಳು ನಡೆಯುತ್ತಿವೆ.‌ ಈ ಮಧ್ಯೆ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ಸಿಎಂ ಆಯ್ಕೆ ಕಸರತ್ತಿನ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,  ಸಿಎಂ ಆಯ್ಕೆ ಕುರಿತು ನಮ್ಮ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಭೆಯಲ್ಲಿ ಒನ್ ಲೈನ್ ರೆಸ್ಯುಲೇಷನ್ ಪಾಸ್ ಮಾಡಿದ್ದೇವೆ  ಸಿಎಂ ಆಯ್ಕೆ ಬಗ್ಗೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.ಸಿಎಂ ಆಯ್ಕೆ ಬಗ್ಗೆ ಸೋನಿಯಾ ಗಾಂಧಿ dks

ನಾನು ದೆಹಲಿಗೆ ಹೋಗುವ  ಬಗ್ಗೆ ಇನ್ನೂ ತೀರ್ಮನವಾಗಿಲ್ಲ. ನನಗೆ ಹೈಕಮಾಂಡ್ ಗಿಫ್ಟ್ ಕೊಡುತ್ತೋ ಇಲ್ಲವೋ ಗೊತ್ತಿಲ್ಲ. ನನಗೆ ರಾಜ್ಯದ ಜನತೆ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Sonia Gandhi- Mallikarjuna Kharge -decision -CM -DK Shivakumar.