Monday, September 14, 2026

BDA Apartments

ಕೇಂದ್ರ ಲಿಖಿತ ಭರವಸೆ ಹಿನ್ನೆಲೆ ಉಪವಾಸ ಅಂತ್ಯ- ಸೋನಂ ವಾಂಗ್ಚುಕ್ ಸಂದೇಶ BDA JK_Adv ...
Home Front Page ಕೇಂದ್ರ ಲಿಖಿತ ಭರವಸೆ ಹಿನ್ನೆಲೆ ಉಪವಾಸ ಅಂತ್ಯ- ಸೋನಂ ವಾಂಗ್ಚುಕ್ ಸಂದೇಶ

ಕೇಂದ್ರ ಲಿಖಿತ ಭರವಸೆ ಹಿನ್ನೆಲೆ ಉಪವಾಸ ಅಂತ್ಯ- ಸೋನಂ ವಾಂಗ್ಚುಕ್ ಸಂದೇಶ

ನವದೆಹಲಿ,ಜುಲೈ,24,2026 (www.justkannada.in):  ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಳೆದ 26 ದಿನಗಳಿಂದ ಹೋರಾಟಗಾರ ಸೋನಂ ವಾಂಗ್ಚುಕ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.

ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಸೋನಂ ವಾಂಗ್ಚುಕ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಕೇಂದ್ರ ಸಚಿವರಾದ ಜೆ.ಪಿ ನಡ್ಡಾ ಮತ್ತು ಜೀತೇಂದ್ರ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದು ಇಬ್ಬರು ಸಚಿವರು ನೀಡಿದ್ದ ಸೂಪ್ ಸೇವಿಸುವ ಮೂಲಕ ಸೋನಂ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ತೆರೆ ಎಳೆದಿದ್ದಾರೆ.ಕೇಂದ್ರ ಲಿಖಿತ ಭರವಸೆ ಹಿನ್ನೆಲೆ ಉಪವಾಸ ಅಂತ್ಯ BDA JK_Adv BDA Adv

ಹಾಗೆಯೇ ಈ ಕುರಿತು ಟ್ವೀಟ್ ಮಾಡಿರುವ ಸೋನಂ ವಾಂಗ್ಚುಕ್, ಕೇಂದ್ರ ಲಿಖಿತ ಭರವಸೆ ಹಿನ್ನೆಲೆ ಉಪವಾಸ  ಅಂತ್ಯಗೊಳಿಸಿದ್ದೇನೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ . ಈಗ ಹೊಣೆಗಾರಿಕೆ ಸಮಯ  ಎಂದು ತಿಳಿಸಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳ ವಿರುದ್ದ ಕ್ರಮ ಕೈಗೊಳ್ಳದಂತೆ ಷರತ್ತು ವಿಧಿಸಿದ್ದಾರೆ.ಸೋನಂ ವಾಂಗ್ಚುಕ್ ಸಂದೇಶ jk02_new jk02 new

Key words:  Fast, ends, Sonam Wangchuk, message