Saturday, August 1, 2026

BDA Apartments

Home Crime ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದ ಪುತ್ರನಿಗೆ ಜೀವಾವಧಿ ಶಿಕ್ಷೆ ಪ್ರಕಟ

ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದ ಪುತ್ರನಿಗೆ ಜೀವಾವಧಿ ಶಿಕ್ಷೆ ಪ್ರಕಟ

ತುಮಕೂರು ಅಕ್ಟೋಬರ್,10,2024 (www.justkannada.in): ಬುದ್ದಿವಾದ ಹೇಳಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದ ಪುತ್ರನಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಕುಣಿಗಲ್‌ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದ ವಿರೂಪಾಕ್ಷ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ತನ್ನ ತಾಯಿ ಜಯಮ್ಮ ಎಂಬುವವರನ್ನು 2021 ಜನವರಿ 15 ರಂದು ಕೊಲೆ ಮಾಡಿದ್ದನು. ಪುತ್ರ ವಿರೂಪಾಕ್ಷ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇರುತ್ತಿದ್ದ. ಹಾಗೆಯೇ  ಡೇರಿಗೆ ಹಾಲು ಹಾಕಿ, ಹೂವು ಮಾರಾಟ ಮಾಡಿ ಕೂಡಿಟ್ಟ ಹಣವನ್ನು ಕೇಳುತ್ತಿದ್ದ.

ಈ ನಡುವೆ ಖರ್ಚಿಗೆ ಹಣ ನೀಡದ ತಾಯಿಯ ಮೇಲೆ ಗುಂಡುಕಲ್ಲು ಎತ್ತಿಹಾಕಿ ವಿರೂಪಾಕ್ಷ ಹತ್ಯೆ ಮಾಡಿದ್ದ ಎನ್ನಲಾಗಿದೆ. ತಾಯಿಯನ್ನು ಕೊಂದಿದ್ದ ವಿರೂಪಾಕ್ಷ ಇದೀಗ  6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

Key words: son, murder, mother,  sentenced , life imprisonment