Friday, September 18, 2026

BDA Apartments

LIC ಹಣದಾಸೆಗೆ ಅಪ್ಪನನ್ನೇ ಕೊಂದ ಪಾಪಿ ಮಗ BDA JK_Adv BDA Adv
Home Crime LIC ಹಣದಾಸೆಗೆ ಅಪ್ಪನನ್ನೇ ಕೊಂದ ಪಾಪಿ ಮಗ

LIC ಹಣದಾಸೆಗೆ ಅಪ್ಪನನ್ನೇ ಕೊಂದ ಪಾಪಿ ಮಗ

ಮೈಸೂರು,ಡಿಸೆಂಬರ್,28,2024 (www.justkannada.in): ಎಲ್ ಐಸಿ ಹಣಕ್ಕಾಗಿ ಅಪ್ಪನಿಗೆ ಚಟ್ಟ ಕಟ್ಟಿದ ಪಾಪಿ ಪುತ್ರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.  ಹೌದು, ಎಲ್ ಐಸಿ ಹಣಕ್ಕಾಗಿ ತಂದೆಯನ್ನೇ ಪುತ್ರನೊಬ್ಬ ಕೊಂದಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕೊಪ್ಪ ಸಮೀಪದ ಗೆರೋಸಿ ಕಾಲೋನಿಯಲ್ಲಿ ನಡೆದಿದೆ.

ಮಗ ಪಾಂಡು ಎಂಬಾತನೇ ತನ್ನ ತಂದೆ ಅಪ್ಫಣ್ಣನನ್ನ ಕೊಂದಿರುವ ಪುತ್ರ. ಹಂತಕ ಪಾಂಡು ಅಪ್ಪ ಅಣ್ಣಪ್ಪನ ಹೆಸರಿನಲ್ಲಿ 30 ಲಕ್ಷ ರೂ ವಿಮೆ ಮಾಡಿಸಿದ್ದನು. ಈ ಹಣವನ್ನ ಪಡೆಯುವ ಸಲುವಾಗಿ ಟಿಬೇಟಿಯನ್ ಕ್ಯಾಂಪಿನಲ್ಲಿ ಕೆಲಸ ಇದೆ ಹೋಗಿ ಎಂದು ತಂದೆ ಅಪ್ಪಣನನ್ನ ಕಳುಹಿಸಿದ್ದಾನೆ. ನಂತರ  ಅಪ್ಪಣ್ಣ ಹೋಗುವ ವೇಳೆ ಹಿಂಬಾಲಿಸಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿ ಶವವನ್ನ ಬಿ.ಎಂ.ರಸ್ತೆಯ ಮಂಚದೇವನಹಳ್ಳಿ ಸಮೀಪ ಎಸೆದ ಪುತ್ರ ಪಾಂಡು  ಹತ್ಯೆ ಬಳಿಕ ಅಪ್ಪನಿಗೆ ಆಕ್ಸಿಡೆಂಟ್ ಆಗಿದೆ ಎಂದು ಪೊಲೀಸರ ಬಳಿ ಡ್ರಾಮ ಮಾಡಿದ್ದಾನೆ.  ಅಪರಿಚಿತ ವಾಹನ ಡಿಕ್ಕಿ ಅಂತ ಬೈಲುಕುಪ್ಪೆ ಪೊಲೀಸರಿಗೆ ದೂರು ಕೊಟ್ಟಿದ್ದ. ಈ ಮಧ್ಯೆ ಆತನ ನಡೆ ಬಗ್ಗೆ ಪೊಲೀಸರಿಗೆ ಅನುಮಾನ ಉಂಟಾಗಿದ್ದು ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಿಸಿದ ವೇಳೆ ಸತ್ಯ ಕಕ್ಕಿದ್ದಾನೆ.

ಇನ್ಸೂರೆನ್ಸ್ ಪಾಲಿಸಿ ಹಣಕ್ಕಾಗಿ ಕೊಂದಿರೋದಾಗಿ  ಪಾಂಡು ತಪ್ಪೊಪ್ಪಿಕೊಂಡಿದ್ದಾನೆ.  ಎಸ್ಪಿ ವಿಷ್ಣುವರ್ಧನ್ , ಡಿವೈಎಸ್ಪಿ ಗೋಪಾಲಕೃಷ್ಣ, ಇನ್ಸ್‌ಪೆಕ್ಟರ್ ಎಂ.ಕೆ.ದೀಪಕ್, ಸಬ್ ಇನ್ಸ್‌ಪೆಕ್ಟರ್  ಅಜಯ್ ಕುಮಾರ್ ಈ  ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನು ವಿಷಯ ತಿಳಿದು ಅಪ್ಪಣ್ಣನ ತಮ್ಮ ಕೂಡ ಸಾವನ್ನಪ್ಪಿದ್ದಾರೆ. ಅಪ್ಪಣ್ಣನ ತಮ್ಮ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Key words:  son, kills father, LIC money, mysore