ಕೆಲ ಅತೃಪ್ತ ಶಾಸಕರು ನನಗೆ ಫೋನ್ ಮಾಡಿದ್ದು ನಿಜ ಎಂದ್ರು ಮಾಜಿ ಸಿಎಂ ಸಿದ್ದರಾಮಯ್ಯ…

ಬೆಂಗಳೂರು,ಜು,27,2019(www.justkannada.in):  ಇಬ್ಬರು ಅತೃಪ್ತ ಶಾಸಕರು  ಪಕ್ಷಕ್ಕೆ ವಾಪಸ್ ಬರಲು ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿದ್ದರು ಆದರೆ ಅವರು  ಕಾಲ್ ಪಿಕ್ ಮಾಡಲಿಲ್ಲ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ನೀಡಿದ್ದ ಹೇಳಿಕೆಗೆ ಇದೀಗ ಸ್ವತಃ ಸಿದ್ದರಾಮಯ್ಯನವರೇ ಪುಷ್ಟಿ ನೀಡಿದ್ದಾರೆ.

ಹೌದು, ನನಗೆ ಕೆಲ ಅತೃಪ್ತ ಶಾಸಕರು ನನಗೆ ಫೋನ್ ಮಾಡಿದ್ದು ನಿಜ. ಆದರೆ ನಾನು ಫೋನ್ ಕರೆ ಸ್ವೀಕರಿಸಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಾಧ್ಯಮದವರ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಲವು ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿದ್ದು ನಿಜ. ಅವರೊಂದಿಗೆ ಮಾತನಾಡಬಾರದು ಎಂದು ನಾನು ಕರೆ ಸ್ವೀಕರಿಸಲಿಲ್ಲ. ಅನರ್ಹತೆ ಶಿಕ್ಷೆಗೆ ಹೆದರಿ ನನಗೆ ಕರೆ ಮಾಡಿದ್ದರು. ಹೀಗಾಗಿ ನಾನು ಕರೆ ಸ್ವೀಕರಿಸಿಲ್ಲ. ಅತೃಪ್ತ ಶಾಸಕರು ಬಂದಿದ್ದರೆ ಕುಮಾರಸ್ವಾಮಿ ಸರ್ಕಾರ ಉರುಳುತ್ತಿರಲಿಲ್ಲ ಎಂದು ಹೇಳಿದರು.

ಬಹುಮತ ಇಲ್ಲದಿದ್ದರೂ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದು ಸಂವಿಧಾನ ಬಾಹಿರ.  ಅವರಿಗೆ ಸೊಂಪಲ್ ಮೆಜಾರಿಟಿ 111 ಸ್ಥಾನ ಎಲ್ಲಿದೆ.  ರಾಜ್ಯಪಾಲರಿಗೆ  11 ಶಾಸಕರ ಪಟ್ಟಿ ಎಲ್ಲಿಕೊಟ್ಟಿದ್ದಾರೆ. ಅತೃಪ್ತ ಶಾಸಕರ ಪಟ್ಟಿ ಕೊಡಲು ಬರಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Key words: Some -rebel MLAs –called-me-  former CM- Siddaramaiah