ಕೆಲವು ಕಾನೂನು ಚೌಕಟ್ಟುಗಳೇ ಇಂತಹ ಸ್ಥಿತಿಗೆ ಕಾರಣ – ಉದ್ಯಮಿ ಸಿದ್ಧಾರ್ಥ್ ಸಾವಿನ ಕುರಿತು ಜೆಡಿಎಸ್ ಶಾಸಕ ಶಿವಲಿಂಗೇಗೌಡ ನುಡಿ…

ಬೆಂಗಳೂರು,ಜು,31,2019(www.justkannada.in): ಉದ್ಯಮಿ ಕಾಫಿಡೇ ಮಾಲೀಕ ಸಿದ್ಧಾರ್ಥ್ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಕೆಲವು ಕಾನೂನು ಚೌಕಟ್ಟುಗಳೇ ಇಂತಹ ಸ್ಥಿತಿಗೆ ಕಾರಣ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಶಾಸಕ ಶಿವಲಿಂಗೇಗೌಡ, ಬಂಡವಾಳ ಹೂಡಿಕೆ ವೇಳೆ ಚಿಕ್ಕಪುಟ್ಟ ಸಮಸ್ಯೆಗಳು ಬರುತ್ತವೆ. ಆದರೆ ಅದನ್ನ ದೊಡ್ಡದು ಮಾಡಿ ಅಪಾಯ ತರುವ ಹಂತಕ್ಕೆ ಹೋಗಬಾರದು. ಮೂರ್ನಾಲ್ಕು ಉದ್ಯಮಿಗಳು ಹೀಗೆ ಆಗಿದ್ದಾರೆ. ಅದ್ದರಿಂದ ಹೊಸ ಉದ್ಯಮಿಗಳಿಗೆ ಆತಂಕ ಉಂಟಾಗುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣವಾದ್ರೆ ಏನು ಹೇಳೊದು ಎಂದಿದ್ದಾರೆ.

ಹಾಗೆಯೇ ದೇಶದಲ್ಲಿ ಉದ್ಯಮಿಗಳು ಇರಬೇಕೋ ಬೇಡವೂ. ಕೆಲವು ಕಾನೂನು ಚೌಕಟ್ಟುಗಳೇ ಇಂತಹ ಸ್ಥಿತಿಗೆ ಕಾರಣ ಎಂದು ಶಾಸಕ ಶಿವಲಿಂಗೇಗೌಡ ನುಡಿದಿದ್ದಾರೆ.

Key words: Some- legal – responsible – this-JDS MLA -Shivalinga Gowda -talks -about -businessman Siddharth’s- death