ಮೈಸೂರಿನಲ್ಲಿ ಅನಗತ್ಯವಾಗಿ ರಸ್ತೆಗಿಳಿದರೆ ವಾಹನ ಸೀಜ್: ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಎಚ್ಚರಿಕೆ

ಮೈಸೂರು, ಏಪ್ರಿಲ್ 15, 2020 (www.justkannada.in): ಕೊರೊನಾ ಸೋಂಕು ಹರಡವುದ ತಡೆಗಟ್ಟಲು ಲಾಕ್‌ಡೌನ್ 2

ಮೈಸೂರಿನಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದ್ದೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

ಅನಗತ್ಯವಾಗಿ ರಸ್ತೆಗಿಳಿದರೆ ವಾಹನ ಜಪ್ತಿ ಮಾಡಿ. ಮೇ 3ರವರೆಗೆ ವಾಹನ ಕೊಡಬೇಡಿ ಎಂದು ಮೈಸೂರಿನಲ್ಲಿ ಎಸ್ ಟಿ ಸೋಮಶೇಖರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಪೌರಕಾರ್ಮಿಕರಿಗೆ ಮೊಟ್ಟೆ ವಿತರಣೆ: ಇಂದಿನಿಂದ ಪೌರ ಕಾರ್ಮಿಕರಿಗೆ ಪೌಷ್ಠಿಕಾಂಶದ ಆಹಾರ ನೀಡಲು ಮೈಸೂರು ‌ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಿದೆ.

ಪೌರ ಕಾರ್ಮಿಕರಿಗೆ ಪ್ರತಿದಿನ ಮೊಟ್ಟೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಎಸ್ ಟಿ ಸೋಮಶೇಖರ್. ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕವಾಗಿ ಮೊಟ್ಟೆ ವಿತರಣೆ ಮಾಡಲಾಯಿತು. ಪೌರ ಕಾರ್ಮಿಕರಿಗೆ ಮೊಟ್ಟೆ ವಿತರಿಸಿದ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ಸಚಿವರಿಗೆ ಶಾಸಕರಾದ ಎಸ್ ಎ ರಾಮದಾಸ್ ನಾಗೇಂದ್ರ ಸೇರಿ ಹಲವು ಅಧಿಕಾರಿಗಳು ಸಾಥ್ ನೀಡಿದರು.