Saturday, September 5, 2026

BDA Apartments

Home Crime ಕಾರಿನಲ್ಲೇ  ಸಾಫ್ಟ್​ವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣು.

ಕಾರಿನಲ್ಲೇ  ಸಾಫ್ಟ್​ವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣು.

ಬೆಂಗಳೂರು,ಡಿಸೆಂಬರ್,21,2022(www.justkannada.in): ಕಾರಿನಲ್ಲೇ ಸಾಫ್ಟ್​ವೇರ್ ಇಂಜಿನಿಯರ್  ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 ಕುರಬರಹಳ್ಳಿ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ವಿಜಯ್​ಕುಮಾರ್(51)  ಮೃತಪಟ್ಟ ಇಂಜಿನೀಯರ್ ಎಂದು ಗುರುತಿಸಲಾಗಿದೆ.  ವಿಜಯ್ ಕುಮಾರ್ ಅವರು ಮಹಾಲಕ್ಷ್ಮೀ ಲೇಔಟ್ ನ ನಿವಾಸಿಯಾಗಿದ್ದು, ಕೆಲವು ದಿನಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು  ಎನ್ನಲಾಗಿದೆ.

ಅನಾರೋಗ್ಯದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಮನೆಯಲ್ಲಿ ಪತ್ನಿ ಜತೆ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯವನ್ನು ಪ್ರಸ್ತಾಪಿಸಿದ್ದರು ಎನ್ನಲಾಗಿದೆ.

Key words: Software -engineer –commits- suicide – car.