ರಕ್ತಪಾತವಾದ್ರೂ ಸರಿ ಸರ್,ಎಂ. ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ಮಾಡಲು ಬಿಡಲ್ಲ- ಮಾಜಿ ಮೇಯರ್ ಪುರೋಷೊತ್ತಮ್….

ಮೈಸೂರು,ಜೂ,6,2020(www.justkannada.in): ರಕ್ತಪಾತವಾದರೂ ಸರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಜತೆ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣ ಮಾಡಲು ಬಿಡಲ್ಲ ಎಂದು ಮೈಸೂರು ಮಾಜಿ ಮೇಯರ್ ಪುರೋಷೊತ್ತಮ್ ತಿಳಿಸಿದರು.

ಜಲದರ್ಶಿನಿಯಲ್ಲಿ ಇಂದು ಮಾಜಿ ಮೇಯರ್ ಪುರೋಷೊತ್ತಮ್ ,ವಿವಿಧ ಸಂಘಗಳ ಸಂಯುಕ್ತಶ್ರಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಸರ್.ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಏನು ಇಲ್ಲ. ಅವರು ದಿವಾನರಾಗಿದ್ದರು, ಕನ್ನಂಬಾಡಿ ಕಟ್ಟೊಕೆ ಇಂಜಿನಿಯರ್ ಆಗುದ್ದರೂ ಅಷ್ಟೇ. ಅವರ ಕೆಲಸಕ್ಕೆ ಅವರು ಸಂಬಳ ಪಡೆದಿದ್ದಾರೆ. ಹೀಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಜತೆ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ಮಾಡೋದು ಬೇಡ ಎಂದು ಆಗ್ರಹಿಸಿದರು.

ಒಡೆಯರ್ ಪ್ರತಿಮೆ ಜೊತೆ ಸರ್ ಎಂ ವಿಶ್ವೆಶ್ವರಯ್ಯ ಪ್ರತಿಮೆ ಸ್ಥಾಪನೆ ಮಾಡೋದು ಕೆಟ್ಟ ಸಂಪ್ರಾದಾಯ. ಇದು ರಾಜಮನೆತನೆಕ್ಕೆ ಮಸಿ ಬಳಿಯುವ ಕಾರ್ಯ. ವಿಶ್ವೆಶ್ವರಯ್ಯ ಹೆಸರು ಇಷ್ಟೋಂದು ಪ್ರಸಿದ್ಧಿ ಆಗಿರುವ ಬಗ್ಗೆ ಗೊಂದಲವಿದೆ. ಮಿರ್ಜಾ ಇಸ್ಮಾಯಿಲ್ ಇವರಿಗಿಂತ ಹೆಚ್ಚು ದಿನ ದಿವಾನಾಗಿದ್ರು, ಆದರೂ ಇವರ ಹೆಸರು ಹೆಚ್ಚು ಚಾಲ್ತಿಯಲ್ಲಿಲ್ಲದಿರೋದು ಗೊಂದಲಕ್ಕೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಕೆಆರ್ ಎಸ್ ನಲ್ಲಿ ನಾಲ್ವಡಿಯವರ ಪ್ರತಿಮೆ ಬಿಟ್ಟು ಬೇರೆ ಪ್ರತಿಮೆ ಸ್ಥಾಪನೆ ಮಾಡಿದ್ರೆ  ಪ್ರತಿಮೆಯನ್ನ ಒಡೆದು ಹಾಕ್ತಿವಿ. ನಮ್ಮ ಪ್ರಾಣ ಹೋದ್ರು ಪರವಾಗಿಲ್ಲ, ನಾವು ಮಾತ್ರ ನಾಲ್ವಡಿಯವರ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆ ಮಾಡಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.sir-m-vishweshwarayya-statue-mysore-former-mayor-purushottam

ನಮ್ಮ ಮನೆಗೆ ನಮ್ಮ ಹೆಸರು ಹಾಕಿಕೊಳ್ತೇವೆ, ಮೇಸ್ತ್ರಿ ಅಥವಾ ಗಾರೆ ಕೆಲಸದ ಹೆಸರು ಹಾಕ್ತಿವಾ…? ಎಂದು ಪ್ರಶ್ನಿಸಿದ ಪುರುಷೋತ್ತಮ್, ಯಾವುದೇ ಕಾರಣಕ್ಕೂ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮನವಿ ಮಾಡ್ತಿವಿ. ತುಂಬಾ ಜನಕ್ಕೆ ಕೆಆರ್ ಎಸ್ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದೆ ವಿಶ್ವೇಶ್ವರಯ್ಯರನ್ನೇ ಒಪ್ಪಿಕೊಂಡಿದ್ರು.ಈಗ ಎಲ್ಲರಿಗೂ ಸತ್ಯ ತಿಳಿದಿದೆ. ವಿಶ್ವೇಶ್ವರಯ್ಯರನ್ನ ದೂರ ತಳ್ಳಿ ನಾಲ್ವಡಿಯನ್ನ ಒಪ್ಪಿಕೊಂಡಿದ್ದಾರೆ. ಪ್ರತಿಮೆ ಸ್ಥಾಪನೆ ವಿಚಾರವಾಗಿ ಒಕ್ಕಲಿಗರು, ಲಿಂಗಾಯಿತರು, ಮುಸ್ಲಿಂರ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡಬೇಕು. ಶೋಷಿತರ ವರ್ಗಕ್ಕೆ ಶಿಕ್ಷಣ ಕೊಡುವುದನ್ನ ತಡೆದ ವ್ಯಕ್ತಿ ವಿಶ್ವೇಶ್ವರಯ್ಯ. ಅಂತವರ ಪ್ರತಿಮೆ ಮಾಡೋದು ಎಷ್ಟು ಸರಿ.? ಎಂದು ಪುರುಷೋತ್ತಮ್ ಕಿಡಿಕಾರಿದರು.

Key words: Sir, M. Vishweshwarayya –statue- mysore- Former Mayor- Purushottam