ಹಲಗೇರಿ ಗ್ರಾಮದಲ್ಲಿ ನೀರವ ಮೌನ: ‘ಪಾಪು’ ಅವರ ಜತೆಗಿನ ಒಡನಾಟ ನೆನೆದು ದುಃಖಕ್ಕೆ ಜಾರಿದ ಕುಟುಂಬ ಸದಸ್ಯರು….

ಹಾವೇರಿ,ಮಾ,17,2020(www.justkannada.in): ಪತ್ರಿಕಾ ಲೋಕದ ಉಜ್ವಲ ತಾರೆ, ಪತ್ರಿಕಾರಂಗದ ದೊಡ್ಡಪ್ಪ ,ಕರ್ನಾಟಕ ವಿದ್ಯಾವರ್ಧಕ ‌ಸಂಘದ ಅಧ್ಯಕ್ಷರಾಗಿದ್ದ ಡಾ.ಪಾಟೀಲ ಪುಟ್ಟಪ್ಪ ಇನ್ನಿಲ್ಲ. ನಾಡೋಜ ಡಾ.ಪಾಟೀಲ ಪುಟ್ಟಪ್ಪ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಪಾಪು ವಿಧಿವಶರಾದ ಹಿನ್ನೆಲೆಯಲ್ಲಿ ಅವರ ಸ್ವಗ್ರಾಮ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಪಾಪು ನಿಧನದ ಸುದ್ದಿ ತಿಳಿದು ಪಾಪು ಕುಟುಂಬಸ್ಥರು ದುಃಖಕ್ಕೆ ಜಾರಿದ್ದಾರೆ. ಪಾಪು ನಿಧನ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬ ಸದಸ್ಯರು ಹಾಗೂ ತಹಶೀಲ್ದಾರ್, ಪಿಎಸ್ಐ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಪಾಟೀಲ್ ಪುಟ್ಟಪ್ಪ ಅವರ ಅಂತ್ಯಕ್ರಿಯೆಗೆ ಹಲಗೇರಿ ಗ್ರಾಮದಲ್ಲಿ ಈಗಾಗಲೆ ಸಿದ್ದತೆಗಳು ನಡೆದಿವೆ.silence-village-patil-puttappa-died-family-members-grief

ವರ್ಷಕ್ಕೆ ಎರಡು ಬಾರಿ ಹಲಗೇರಿ ಗ್ರಾಮದಲ್ಲಿನ ಮನೆಗೆ ಬಂದು ಮನೆಯವರ ಜೊತೆ ಸ್ವಲ್ಪ ಕಾಲ ಕಳೆಯುತ್ತಿದ್ದರು. ಪಾಪು ಅವರೊಂದಿಗಿನ ಒಡನಾಟ ನೆನೆದು ಅವರ ಕುಟುಂಬ ಸದಸ್ಯರು ದುಃಖಕ್ಕೆ ಜಾರಿದರು.

Key words: silence – village –patil puttappa- died- Family members -Grief