ಮೇಕೆದಾಟು ಪಾದಯಾತ್ರೆಗೆ ತೆರಳುತ್ತಿದ್ದ ವಾಹನಗಳ ಸೀಜ್:  ಬಸ್ ಮಾಲೀಕರಿಂದ ಆಕ್ರೋಶ.

ರಾಮನಗರ,ಜನವರಿ,12,2022(www.justkannada.in):  ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿದ್ದ ಪಾದಯಾತ್ರೆಗೆ ತೆರಳುತ್ತಿದ್ದ ವಾಹನಗಳನ್ನ ಆರ್.ಟಿ.ಓ ಅಧಿಕಾರಿಗಳು ಮತ್ತು ಪೊಲೀಸರು ಸೀಜ್ ಮಾಡಿ ಕೇಸ್ ದಾಖಲಿಸಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರದ ನಡೆಗೆ ಖಾಸಗಿ ಬಸ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾದಯಾತ್ರೆ ವೇಳೆ ಬಾಡಿಗೆಗೆ ತೆರಳಿದ್ದ ಬಸ್ ಗಳನ್ನು ಜಪ್ತಿ ಮಾಡಿರುವುದಕ್ಕೆ ಖಾಸಗಿ ಬಸ್ ಮಾಲೀಕರು ಖಂಡಿಸಿದ್ದು, ಸರ್ಕಾರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವ ಕೆಲಸ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧೈರ್ಯ ಇದ್ದರೆ ಪಾದಯಾತ್ರೆ ತಡೆಯಲಿ ಆದರೆ ವಾಹನಗಳ ಮೇಲೆ ಕೇಸ್ ಹಾಕೋದು ಎಷ್ಟು ಸರಿ ಎಂದು ಪ್ರಶ್ನೆಸಿರುವ ಬಸ್ ಮಾಲೀಕರು, ಮೊದಲೇ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ನಿಂದಾಗಿ ಉದ್ಯಮ ಸಂಪೂರ್ಣ ಕುಸಿದಿದೆ. ಇದೀಗ ಮತ್ತೆ ವಾಹನಗಳ ಸೀಜ್ ಮಾಡಿ, ಕೇಸ್ ದಾಖಲಿಸಿದ್ರೆ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣ ಆಗುತ್ತೆ. ಹಾಗಾಗಿ ಕೂಡಲೇ ಸೀಜ್ ಮಾಡಿರುವ ವಾಹನಗಳನ್ನು ಬಿಡುಗಡೆ ಮಾಡಬೇಕು. ಕೇಸ್ ಗಳನ್ನು ವಾಪಸ್ ಪಡೆಯಬೇಕು ಎಂದು ಖಾಸಗಿ ಬಸ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: siege – vehicles –congress-padayatre