ಸಿದ್ಧರಾಮೋತ್ಸವ: ಸಿದ್ಧರಾಮಯ್ಯ ಕುರಿತ ಮೂರು ಪುಸ್ತಕಗಳ ಬಿಡುಗಡೆ.

ದಾವಣಗೆರೆ,ಆಗಸ್ಟ್,3,2022(www.justkannada.in):  ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ ಸಂಭ್ರಮವಾಗಿದ್ದು  ಈ ಅಂಗವಾಗಿ ಇಂದು ದಾವಣಗೆರೆಯ ಎಸ್ ಎಸ್ ಮೈದಾನದಲ್ಲಿ ಅಮೃತ ಮಹೋತ್ಸವ, ಸಿದ್ಧರಾಮೋತ್ಸವ ಕಾರ್ಯಕ್ರಮನಡೆಯುತ್ತಿದೆ. ಈ ವೇಳೆ ಸಿದ್ದರಾಮಯ್ಯ ಕುರಿತು ಮೂರು ಪುಸ್ತಕಗಳ ಬಿಡುಗಡೆ ಮಾಡಲಾಗಿದೆ.

ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ ಸಿದ್ಧರಾಮಯ್ಯಗೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಸನ್ಮಾನಿಸಿದರು. ಬಳಿಕ ಸಿದ್ಧರಾಮಯ್ಯ ಕುರಿತ ಸಮರ ಸೇನಾನಿ, ನುಡಿದಂತೆ ನಡೆ ಎಂಬ ಪುಸ್ತಕಗಳನ್ನ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿದ್ಧರಾಮೋತ್ಸವ ಹಿನ್ನೆಲೆ ನಗರದ ಎಲ್ಲೆಡೆ ಫ್ಲೆಕ್ಸ್‌ ಗಳು ರಾರಾಜಿಸುತ್ತಿದೆ. ಇತ್ತ ಅಭಿಮಾನಿಗಳಿಗಂತೂ ಸಂಭ್ರಮ ಮನೆ ಮಾಡಿದೆ.

Key words: Siddharamotsava-Release -three -books – Siddaramaiah.