ಕಾಂಗ್ರೆಸ್ ಗೆ ಅಧಿಕಾರ ಸಿಕ್ಕರೆ ಶಿಕ್ಷಣ, ಪಂಚಾಯತ್ ರಾಜ್ ವಿಕೇಂದ್ರಿಕರಣ ಜಾರಿ – ಮಾಜಿ ಸ್ಪೀಕರ್ ರಮೇಶ್ ಕುಮಾರ್.

ದಾವಣಗೆರೆ,ಆಗಸ್ಟ್,3,2022(www.justkannada.in):   ಮಾಜಿ ಸಿಎಂ ಸಿದ್ಧರಾಮಯ್ಯ ಹುಟ್ಟುಹಬ್ಬ ಹಿನ್ನೆಲೆ ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ಧರಾಮೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿರುವ ರಮೇಶ್ ಕುಮಾರ್, ಸ್ವಾತಂತ್ರಕ್ಕಾಗಿ ಹೋರಾಟ ಮಾಡದವರಿಗೆ ಧಿಕ್ಕಾರ. ಮನುವಾದಿಗಳು ಸಂವಿಧಾನದ ವಿರೋಧಿಗಳು. ಕಾಂಗ್ರೆಸ್ ಅಧಿಕಾರಕ್ಕೆ  ಬಂದರೆ ಶಿಕ್ಷಣ,  ಪಂಚಾಯತ್ ರಾಜ್ ವಿಕೇಂಧ್ರೀಕರಣ ಜಾರಿ. ಪೊಲೀಸ್ ಇಲಾಖೆಯನ್ನ ದುರಸ್ತಿ ಮಾಡಬೇಕು. ವ್ಯವಸ್ಥೆ ಸರಿಮಾಡದಿದ್ರೆ ನ್ಯಾಯ ಸಿಗಲ್ಲ. ಸಂವಿಧಾನದ ಆಶಯಗಳನ್ನ ಈಡೇರಿಸಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆತಂಕದಲ್ಲಿದ್ದಾರೆ. ಆತಂಕ ದೂರ ಮಾಡಬೇಕು ಎಂದರು.farmers-75-thosend-compensation-former-speaker-ramesh-kumar-demands

ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,  ಸಿದ್ಧರಾಮೋತ್ಸವ  ಕಾರ್ಯಕ್ರಮದಿಂದ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗಲಿದೆ.  ಸಿದ್ದರಾಮಯ್ಯರ ಎಲ್ಲಾ ಕಾರ್ಯಕ್ರಮಗಳು ಜನರನ್ನ ತಲುಪಿವೆ. ಕಾರ್ಯಕ್ರಮದ ಮೂಲಕ ಸಿದ್ಧರಾಮಯ್ಯರಿಗೆ ಶಕ್ತಿ ತುಂಬೋಣ. ಶಕ್ತಿ ತುಂಬುವ ಮೂಲಕ ನಮ್ಮ ಕನಸು ನನಸು ಮಾಡೋಣ ಎಂದರು.

Key words: siddaramotsava-Congress -Former Speaker- Ramesh Kumar.