ದ್ವೇಷದ ರಾಜಕಾರಣ ಸಿದ‍್ಧರಾಮಯ್ಯರಿಗೆ ಶೋಭೆ ತರಲ್ಲ: ‘ಕೈ-ಬಿಜೆಪಿ’ ಕಾರ್ಯಕರ್ತರ ಗಲಾಟೆ ಕುರಿತು ವಿ.ಸೋಮಣ್ಣ ವಾಗ್ದಾಳಿ.

ಮೈಸೂರು,ಏಪ್ರಿಲ್,28,2023(www.justkannada.in):  ಸಿದ್ಧರಾಮನಹುಂಡಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ವಿ.ಸೋಮಣ್ಣ, ದ್ವೇಷದ ರಾಜಕಾರಣ ಸಿದ‍್ಧರಾಮಯ್ಯರಿಗೆ ಶೋಭೆ ತರಲ್ಲ. ಸಿದ್ಧರಾಮಯ್ಯಗೆ  ಹತಾಶೆ ಸೋಲಿನ ಭಯ ಶುರುವಾಗಿದೆ. ವರುಣಾದಲ್ಲಿ ಬಿಜೆಪಿ ಕಾರ್ಯಕರ್ತರನ್ನ ಭಯ ಪಡಿಸುವ ಕೆಲಸ ಆಗಿದೆ  ಎಂದು ಆರೋಪಿಸಿದರು.

ಸಿದ್ದರಾಮಯ್ಯ ಈ ರೀತಿ ಸಣ್ಣತನ ಯಾಕೆ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ನನಗೆ ಯಾವುದೇ ರಕ್ಷಣೆ ಬೇಡ ವರುಣಾ. ಕ್ಷೇತ್ರದ ಜನರೇ ನನ್ನ ರಕ್ಷಣೆ. ಇಂತಹ ಘಟನೆಗಳಿಂದ ಹೆದರಲ್ಲ ಎಂದು ವಿ.ಸೋಮಣ್ಣ ತಿಳಿಸಿದರು.

Key words: siddaramanahundi-minister V.Somanna-Former CM- Siddaramaiah