ಸಿದ್ದರಾಮಯ್ಯ ಸದನದಲ್ಲೂ ಅದೇ ವೀರಾವೇಶ ತೋರಿಸಲಿ – ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್

ಮೈಸೂರು,ಸೆಪ್ಟೆಂಬರ್,19,2020(www.justkannada.in) : ಸೆ.21ರಿಂದ ಅಧಿವೇಶನ ಆರಂಭವಾಗಲಿದ್ದು, ಸಿದ್ದರಾಮಯ್ಯ ಮೈಸೂರಿನಲ್ಲಿ ವೀರಾವೇಷ ಮಾತುಗಳನ್ನಾಡುತ್ತಾರೆ. ಸದನದಲ್ಲೂ ಅದೇ ವೀರಾವೇಶ ತೋರಿಸಲಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದರು.

jk-logo-justkannada-logo

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರ ಸತ್ತಿದೆ. ಮಿನಿಸ್ಟರ್ ಗಳೂ ಕೆಲಸ ಮಾಡುತ್ತಿಲ್ಲ, ಇಬ್ಬಿಬ್ಬರು ಸಿಎಂ  ಇದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್ ಅವರು, ಸೆ.21ರಿಂದ ಅಧಿವೇಶನ ನಡೆಯತ್ತೆ. ಸಿದ್ದರಾಮಯ್ಯನವರು ವೀರಾವೇಶದಲ್ಲಿ ಮೈಸೂರಿನಲ್ಲಿ ಏನು ಮಾತಾಡ್ತಾರೆ. ಅದನ್ನು ಅಧಿವೇಶನದಲ್ಲಿ ಮಾತಾಡಲಿ, ಅಷ್ಟೇ ವೀರಾವೇಶದಿಂದ ಉತ್ತರ ನೀಡತಕ್ಕಂತಹ ಶಕ್ತಿ ದೇವರು ನಮಗೂ ಕೂಡ ಕೊಟ್ಟಿದ್ದಾನೆ ಎಂದು ಹೇಳಿದರು.

Siddaramaiah-Talk-Session-Minister-S.T.Somashekhar-Tong

ವಿರೋಧ ಪಕ್ಷದವರ ಕೆಲಸ ಏನಿದೆ? ವಿರೋಧ ಪಕ್ಷದವರು ವಿರೋಧ ಮಾಡುವುದಕ್ಕೋಸ್ಕರ ಸಿದ್ಧತೆ ಮಾಡಿಕೊಳ್ಳುತ್ತಾರೆ.ನಾವು ಆಡಳಿತ ಪಕ್ಷದವರು ಆಡಳಿತ ಮಾಡುವುದಕ್ಕೋಸ್ಕರ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

key words : Siddaramaiah-Talk-Session-Minister-S.T.Somashekhar-Tong