ಸಿದ್ದರಾಮಯ್ಯ ಸಿಎಂ ಸ್ಥಾನ ಉಳಿಸಿಕೊಳ್ಳಲು ಡಿಕೆಶಿ ಪ್ರಕರಣ ತನಿಖೆಯ ಅನುಮತಿ ವಾಪಸ್ ಪಡೆದಿದ್ದಾರೆ- ಕೆ.ಎಸ್ ಈಶ್ವರಪ್ಪ

ಹಾವೇರಿ,ನವೆಂಬರ್,24,2023(www.justkannada.in): ಸಿದ್ದರಾಮಯ್ಯ ಸಿಎಂ ಸ್ಥಾನ ಉಳಿಸಿಕೊಳ್ಳಲು ಡಿಕೆಶಿ ಪ್ರಕರಣ ತನಿಖೆಯ ಅನುಮತಿ ವಾಪಸ್ ಪಡೆದಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆಮ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಯಾವತ್ತು ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ. ಇದು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಡಿಕೆಸಿ ಪ್ರಕರಣ ವಾಪಸ್ ಪಡೆಯಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಆಸಕ್ತಿ ತೋರಿ ಅನುಮತಿ ವಾಪಸ್ ಪಡೆದಿಲ್ಲ. ರಾಹುಲ್ ಗಾಂಧಿ, ಸೊನಿಯಾ ಗಾಂಧಿ ಒತ್ತಡದಿಂದ ಕೇಸ್ ವಾಪಸ್ ಪಡೆಯಲಾಗಿದೆ. ಇದು ಸಿದ್ದರಾಮಯ್ಯನವರಿಗೆ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆಯಾಗಿದೆ  ಇದು ನಾಚಿಕೆಗೇಡು, ಖಂಡನಿಯ ಎಂದರು.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ರಾಜ್ಯದ ಪ್ರಮುಖರು ಸೇರಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವದು. ಡಿಕೆ ಶಿವಕುಮಾರ್ ಮೇಲೆ ಆರೋಪ ಬಂದಿದೆ. ಮೊದಲು ರಾಜಿನಾಮೆ ಕೊಡಬೇಕು. ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಇದ್ದು ಸಿಬಿಐ ದಾಖಲೆ ತಿದ್ದಬಹುದು. ಆದ್ದರಿಂದ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

Key words: Siddaramaiah –withdraws- permission – investigate -retain -CM post – KS Eshwarappa