ಸಿದ್ದರಾಮಯ್ಯ ಹೇಳಿಕೆಯಲ್ಲಿ ತಪ್ಪಿಲ್ಲ: ಸಿಎಂ ಸ್ಥಾನದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ-ಡಿಸಿಎಂ ಡಾ.ಜಿ.ಪರಮೇಶ್ವರ್…

ಬೆಂಗಳೂರು, ಮೇ 16,2019(www.justkannada.in): ಸಿಎಂ ಸ್ಥಾನಕ್ಕೆ  ಎಚ್‌ ಡಿ ರೇವಣ್ಣ ಕೂಡ ಅರ್ಹರು ಎಂದು  ಸಿದ್ದರಾಮಯ್ಯ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ  ಅಂತಾ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್  ತಿಳಿಸಿದರು.

ಇಂದು ಈ ಬಗ್ಗೆ ಮಾತನಾಡಿದ ಡಾ.ಜಿ. ಪರಮೇಶ್ವರ್, ಸಿಎಂ ಸ್ಥಾನದಲ್ಲಿ ಸದ್ಯಕ್ಕೆ ಹೆಚ್.ಡಿ ಕುಮಾರಸ್ವಾಮಿ ಇದ್ದಾರೆ.  ಹೀಗಾಗಿ ಸಿಎಂ ಸ್ಥಾನದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಈಗ ಸಿಎಂ ಸ್ಥಾನಕ್ಕೆ ಆಯ್ಕೆ ನಡೆಯುತ್ತಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತು ರೇವಣ್ಣ ಇಬ್ಬರು ಆತ್ಮೀಯರು. ಸಿದ್ದರಾಮಯ್ಯ ಅವರ ಟ್ವೀಟ್‌ನಲ್ಲಿ ನನಗೆ ತಪ್ಪೇನು ಕಾಣಿಸುತ್ತಿಲ್ಲ, ಮೈತ್ರಿ ಸರ್ಕಾರದಲ್ಲಿ ಹಲವರಿಗೆ ಸಿಎಂ ಆಗುವ ಅರ್ಹತೆ ಇದೆ ಅದರಲ್ಲಿ ರೇವಣ್ಣ ಕೂಡ ಎಂದು ಅವರು ಹೇಳಿದ್ದಾರಷ್ಟೆ. ನಾನು ಸೇರಿ ಬಹಳ ಜನರಿಗೆ ಸಿಎಂ ಆಗುವ ಆಸೆ ಇದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದರು.

ಬಿಎಸ್ ಯಡಿಯೂರಪ್ಪ ನೂರು ಬಾರಿ ಜಪ ಮಾಡಿದ್ರೂ ಸಮ್ಮಿಶ್ರ ಸರ್ಕಾರ ಬೀಳಲ್ಲ. ಸಮ್ಮಿಶ್ರ ಸರ್ಕಾರ ನಾಲ್ಕು ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ನಾಲ್ಕು ವರ್ಷ ಉತ್ತಮ ಆಡಳಿತ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Key words: Siddaramaiah- statement –incorrect-DCM- Dr. G. Parameshwar.