ಸಿದ್ಧರಾಮಯ್ಯ ಹೇಳಿದ್ದೇ ವೇದವಾಕ್ಯವಲ್ಲ- ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು.

ಬೆಂಗಳೂರು,ಜುಲೈ,29,2022(www.justkannada.in):  ಸಿಎಂ ಬೊಮ್ಮಾಯಿ ಮಂಗಳೂರಿಗೆ ಭೇಟಿ ನೀಡಿದ ವೇಳೆ ಮತ್ತೊಂದು ಕೊಲೆ ನಡೆದಿರುವುದು ಅವರಿಗೆ ಮಂಗಳಾರತಿ ಮಾಡಿದಂತಾಗಿದೆ  ಎಂದು ಹೇಳಿಕೆ ನೀಡಿದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ​ ನಾಯಕರ ಆರೋಪಗಳು ಹಾಸ್ಯಾಸ್ಪದವಾಗಿದೆ. ಸಿದ್ಧರಾಮಯ್ಯ ಹೇಳಿದ್ದೇ ವೇದವಾಕ್ಯ ಅಲ್ಲ. 3 ಪ್ರಕರಣಗಳನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂದು ಹಿರಿಯ ಪೊಲೀಸ್​ ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ಫಾಜಿಲ್​ ಕೊಲೆ ಪ್ರಕರಣದಲ್ಲಿ ಯಾವ ಮಾಹಿತಿ ಸಿಕ್ಕಿಲ್ಲ. ಅಧಿಕಾರಿಗಳಿಂದ ನಾನು ಮಾಹಿತಿಯನ್ನು ಪಡೆಯುತ್ತೇನೆ. ಇದು ಕೇವಲ ಕೊಲೆಯಲ್ಲ, ಪೂರ್ವನಿಯೋಜಿತ ಕೃತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯಾರೂ ಕೂಡ ರಾಜೀನಾಮೆ ನೀಡುವ ಅಗತ್ಯವಿಲ್ಲ. ನಾವು ಸಮರ್ಥವಾಗಿ ಎದುರಿಸುತ್ತಿದ್ದೇವೆ, ಹಿಂದೆ ಬಿದ್ದಿಲ್ಲ. ಇದನ್ನ ನಾನು ಕೇವಲ ಕೊಲೆ ಎಂದು ನೋಡುತ್ತಿಲ್ಲ. ಪ್ರವೀಣ್ ಮನೆಗೆ ಹೋಗಿದ್ದ ಸಂದರ್ಭ ಇನ್ನೊಂದು ಕೊಲೆ ಆಗಿದೆ. ಮೂರು ಕೊಲೆ ಗಂಭೀರವಾಗಿ ತೆಗೆದುಕೊಳ್ಳಲು ಹೇಳಿದ್ದೇವೆ. ಇನ್ನಷ್ಟು ಕಠಿಣ ಕ್ರಮ‌ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.coronavirus-vaccine-tough-action-home-minister-basavaraja-bommai

ಸಿದ್ದರಾಮಯ್ಯ ಅವರ ಕಾಲದಲ್ಲಿ ಏನು ಮಾಡ್ತಿದ್ರು, ನಮಗೆ ಗೊತ್ತಿದೆ ಹೇಗೆ ನಿಭಾಯಿಸಬೇಕು ಅಂತ. ಇದನ್ನು ಕೇವಲ ಕೊಲೆ ಅಂತ ನೋಡ್ತಾ ಇಲ್ಲ. ಆರ್ಗನೈಸ್ಡ್ ಕ್ರೈಂ ಇದರ ಹಿಂದಿದೆ. ಕಾಂಗ್ರೆಸ್ ಆರೋಪಗಳು ಹಾಸ್ಯಾಸ್ಪದವಾಗಿದೆ. ಯಾರೂ ರಾಜೀನಾಮೆ ಕೊಡುವ ಅಗತ್ಯ ಇಲ್ಲ. ಸಿದ್ಧರಾಮಯ್ಯ ಹೇಳಿದ್ದೇ ವೇದ ವಾಕ್ಯ ಅಲ್ಲ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದರು.

Key words: Siddaramaiah- said – not- Vedavakya-CM -Basarawaja Bommai