ಸಿದ್ಧರಾಮಯ್ಯ ನನ್ನ ನಡುವೆ ಸಂಬಂಧ ಚೆನ್ನಾಗಿದೆ: ಬೆಂಬಲ ಕೇಳುತ್ತೇನೆ- ಮಾಜಿ ಸಚಿವ ಹೆಚ್.ಡಿ ರೇವಣ್ಣ.

ಹಾಸನ,ಜೂನ್,6,2022(www.justkannada.in):  ಜೂನ್ 10 ರಂದು ನಡೆಯುವ ರಾಜ್ಯದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆ ಸಾಕಷ್ಟು ಕುತೂಹಲವನ್ನುಂಟು ಮಾಡಿದ್ದು, ಈ ಮಧ್ಯೆ ಬಿಜೆಪಿಯ ಮೂವರು, ಕಾಂಗ್ರೆಸ್ ನ ಇಬ್ಬರು, ಜೆಡಿಎಸ್ ನ ಒಬ್ಬರು ಸ್ಪರ್ಧಾ ಕಣದಲ್ಲಿದ್ದಾರೆ.

ತಮ್ಮ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರನ್ನ ಗೆಲ್ಲಿಸಲು ಜೆಡಿಎಸ್ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದು ಕಾಂಗ್ರೆಸ್ 2ನೇ ಅಭ್ಯರ್ಥಿ ಹಿಂಪಡೆಯುವಂತೆ ತೆರೆಮರೆಯಲ್ಲಿ ಒತ್ತಾಯ ಮಾಡಿದ್ದರು. ಆದರೂ ಸಹ ಪಟ್ಟು ಬಿಡದ ಕಾಂಗ್ರೆಸ್ 2ನೇ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯದೇ ಸ್ಪರ್ಧೆಗಿಳಿದಿದೆ.

ಈ ಕುರಿತು ಮಾತನಾಡಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ, ರಾಜ್ಯ ರಾಜಕಾರದಲ್ಲಿ ಸಣ್ಣಪುಟ್ಟದ್ದು ಇದ್ದೇ ಇರುತ್ತದೆ. ಕೋಮುವಾದಿಗಳನ್ನ ದೂರವಿಡಲು ಎಲ್ಲರೂ ಒಗ್ಗಟ್ಟಾಗಿರಬೇಕು. ಎಲ್ಲರೂ ಒಟ್ಟಾಗಿ ಕುಪೇಂದ್ರ ರೆಡ್ಡಿ ಬೆಂಬಲಿಸಲಿ. ಮಾಜಿ ಸಿಎಂ ಸಿದ್ದರಾಮಯ್ಯ ಕೂಲ್ ಆಗಲಿ.  ಸಿದ್ದರಾಮಯ್ಯ ಭೇಟಿಯಾಗಿ ಬೆಂಬಲ ಕೇಳುತ್ತೇನೆ ಸಿದ್ದರಾಮಯ್ಯ ನನ್ನ ನಡುವೆ ಸಂಬಂಧ ಚೆನ್ನಾಗಿದೆ. ಹೀಗಾಗಿ ಭೇಟಿಯಾಗಿ ನಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕೋರುತ್ತೇನೆ ಎಂದಿದ್ದಾರೆ.

Key words: Siddaramaiah- relationship –between- me-support-Former Minister-HD Revanna.