ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಸಿದ್ಧರಾಮಯ್ಯ ,ರಾಹುಲ್ ಗಾಂಧಿ ಮೌನವೇಕೆ..? ಸಿಎಂ ಬೊಮ್ಮಾಯಿ ಕಿಡಿ.

ಉಡುಪಿ,ನವೆಂಬರ್,8,2022(www.justkannada.in):  ಹಿಂದೂ ಪದ ಪರ್ಷಿಯನ್ ನಿಂದ ಬಂದಿದ್ದು. ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ ಎಂದು ಹೇಳಿಕೆ ನೀಡಿದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಉಡುಪಿಯಲ್ಲಿ ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸತೀಶ್ ಜಾರಕಿಹೊಳಿ ಅರೇ ಬರೇ ಓದಿದ ವ್ಯಕ್ತಿ. ಅರೆ ಜ್ಞಾನ ಹೊಂದಿರುವ ವ್ಯಕ್ತಿ.  ಅಳವಾದ ಅಧ್ಯಯನ ಇಲ್ಲದೆ ಮಾತನಾಡಿದ್ದಾರೆ. ಸತೀಶ್ ಹೇಳಿಕೆಯಿಂದ ಭಾರತ ಭಾವನೆಗೆ ಧಕ್ಕೆಯಾಗಿದೆ. ಇದು ದೇಶದ್ರೋಹದ ಕೆಲಸ. ಹಿಂದೂಗಳಿಗೆ ಘಾಸಿಯಾಗುವ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಲ್ಪ ಸಂಖ್ಯಾತರ ವೋಟ್ ಬರುತ್ತೆ ಎಂಬ ಭ್ರಮೆ ಅವರಿಗಿದೆ. ಈ ಹೇಳಿಕೆಯನ್ನ ರಾಜ್ಯದ ಜನ ಒಕ್ಕೊರಲಿನಿಂದ ಖಂಡಿಸಬೇಕು.  ಈ ಬಗ್ಗೆ ಸಿದ್ಧರಾಮಯ್ಯ ರಾಹುಲ್ ಗಾಂಧಿ ಮೌನವೇಕೆ..?   ಸತೀಶ್ ಮಾತಿಗೆ ಸಮ್ಮತಿನಾ..?   ಸತೀಶ್ ಸಮರ್ಥನೆ ಮಾಡಿ ಹುಳಿ ಹಿಂಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹರಿಹಾಯ್ದರು.

Key words: Siddaramaiah – Rahul Gandhi- silent -Satish Jarakiholi- statement – CM Bommai

ENGLISH SUMMARY…

Why Siddaramaiah and Rahul Gandhi are silent over Satish Jarkiholi’s statement on ‘Hindu’ word? CM Bommai
Udupi, November 8, 2022 (www.justkannada.in): KPCC Working President Satish Jarkiholi recently expressed his view that the word ‘Hindu’ is derived from Persian language and it means obscene. Chief Minister Basavaraj Bommai has severely criticized Satish Jarkiholi’s views.
Speaking in Udupi today, the Chief Minister said that Satish Jarkiholi is not a well-read person. “He is a person with half-knowledge. He has spoken without proper knowledge. His words has insulted the feelings of the entire country. It is nothing but anti-national view,” he alleged.
“He is in a misconception that he will get minorities votes by saying such words. All the people of the state should jointly oppose this. Why is Siddaramaiah and Rahul Gandhi silent over this? Do they agree to Satish Jarkiholi’s views? Moreover Satish is adding fuel to the fire by defending himself,” he observed.
Keywords: Chief Minister Basavaraj Bommai/ Satish Jarkiholi/ Hindu/ Persian