ಸಿದ್ಧರಾಮಯ್ಯಗೆ ಈಗ ತಪ್ಪಿನ ಅರಿವಾಗಿದೆ: ಒಳ್ಳೆಯ ಬುದ್ಧಿ ಬಂದಿದೆ- ಶಾಮನೂರು ಶಿವಶಂಕರಪ್ಪ.

ದಾವಣಗೆರೆ,ಆಗಸ್ಟ್,20, 2022(www.justkannada.in):  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗ ತಪ್ಪಿನ ಅರಿವಾಗಿದೆ. ಒಳ್ಳೆಯ ಬುದ್ಧಿ ಬಂದಿದೆ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ, ಸಿದ್ಧರಾಮಯ್ಯ ಧರ್ಮ ಒಡೆಯಲು ಕೈ ಹಾಕಲ್ಲ ಎಂದಿದ್ದಾರೆ.  ಇದರಲ್ಲಿ ಸಿದ್ಧರಾಮಯ್ಯ ಪಾತ್ರ ಇರಲಿಲ್ಲ.  ಬೇರೆಯವರ ಒತ್ತಡ ಇತ್ತು. ಆ ಆರೋಪ ಮಾತ್ರ ಅವರ ಮೇಲೆ ಬಂತು ಅಷ್ಟೇ. ನಾನು ಈ ಬಾರಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

ನಿನ್ನೆ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ಧ ಮಾಜಿ ಸಿಎಂ ಸಿದ್ದರಾಮಯ್ಯ, ಮಠದ ಶ್ರೀಗಳ ಬಳಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಕುರಿತು ಪಶ್ಚಾತಾಪ ವ್ಯಕ್ತಪಡಿಸಿದ್ಧರು ಎನ್ನಲಾಗಿತ್ತು.

Key words: Siddaramaiah –now- realizes -his mistake-Shamanur Shivshankarappa.