ದೇಶಭಕ್ತಿ ಬಗ್ಗೆ ಸಂದೇಹವಿದೆ ಎಂಬ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಲು ಸಿದ್ಧರಾಮಯ್ಯ ನಕಾರ…

 

ನವದೆಹಲಿ,ಫೆಬ್ರವರಿ,17,2021(www.justkannada.in): ಸಿದ್ದರಾಮಯ್ಯ ಅವರ ದೇಶಭಕ್ತಿ ಬಗ್ಗೆ ಸಂದೇಹವಿದೆ ಎಂದು  ಪೇಜಾವರ ಶ್ರೀಗಳು ನೀಡಿರುವ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿಲು ನಿರಾಕರಿಸಿದ್ದಾರೆ.jk

ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ಸಿದ್ಧರಾಮಯ್ಯ, ನಾನು ಯಾವ ಸ್ವಾಮಿ ಬಗ್ಗೆಯೂ ಮಾತನಾಡುವುದಿಲ್ಲ. ಅವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

Rastrapitha-Mahatma Gandhi- Remembrance- Former CM- Siddaramaiah
siddaramaih#profile..

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಬಂದಿದ್ದರು. ಆದರೆ ನಾನು ವಿವಾದಿತ ರಾಮಮಂದಿರಕ್ಕೆ ದೇಣಿಗೆ ಕೊಡಲ್ಲ ಎಂದಿದ್ದೆ ಎಂದು ಹೇಳಿಕೆ ನೀಡಿದ್ದ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ್ದ ಪೇಜಾವರ ಶ್ರೀಗಳು, ಸಿದ್ಧರಾಮಯ್ಯ ಅವರ ದೇಶಭಕ್ತಿ ಬಗ್ಗೆ ಸಂದೇಹವಿದೆ ಎಂದಿದ್ದರು.

Key words: Siddaramaiah –not-responds – statement -Pajavara Sri